ಗಂಗಾವತಿ:ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತಿಯ ಹೇಮಗುಡ್ಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈತೋಟ ನಿರ್ಮಾಣ ಮಾಡಲಾಗಿದೆ.
ನರೇಗಾ ಯೋಜನೆಯಡಿ ವಸತಿ ಶಾಲೆಯ ಆವರಣದಲ್ಲಿ ಕೈತೋಟ ನಿರ್ಮಾಣ - ಗಂಗಾವತಿ ಸುದ್ದಿ
ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದಂತಾಗಿದ್ದ ಕೂಲಿಕಾರಿಗಾಗಿಯೇ ಉದ್ಯೋಗ ಸೃಷ್ಟಿಸಿ, ಹತ್ತು ದಿನಗಳಲ್ಲಿ ಈ ಕೈತೋಟವನ್ನು ನಿರ್ಮಾಣ ಮಾಡಲಾಗಿದೆ.
ನರೇಗಾ ಯೋಜನೆಯಡಿ ವಸತಿ ಶಾಲೆಯ ಆವರಣದಲ್ಲಿ ಕೈತೋಟ ನಿರ್ಮಾಣ
ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದಂತಾಗಿದ್ದ ಕೂಲಿಕಾರಿಗಾಗಿಯೇ ಉದ್ಯೋಗ ಸೃಷ್ಟಿಸಿ, ಹತ್ತು ದಿನಗಳಲ್ಲಿ ಈ ಕೈತೋಟವನ್ನು ನಿರ್ಮಾಣ ಮಾಡಲಾಗಿದೆ. ಕೈತೋಟದಲ್ಲಿ ಈಗಾಗಲೇ ನಾನಾ ಬಗೆಯ ತರಕಾರಿ, ಸೊಪ್ಪುಗಳ ನಾಟಿ ಮಾಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭವಾಗಲಿದ್ದು, ಮಕ್ಕಳು ವಸತಿ ನಿಲಯಕ್ಕೆ ಬರುವ ಹೊತ್ತಿಗೆ ತಾಜಾ ಮತ್ತು ತರಕಾರಿ ಸಿಗಲಿ ಎಂಬ ಉದ್ದೇಶಕ್ಕೆ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಮೋಹನ್ ತಿಳಿಸಿದ್ದಾರೆ.