ಗಂಗಾವತಿ (ಕೊಪ್ಪಳ):2009ರಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ನಡೆದಿದ್ದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯವು ಗುತ್ತಿಗೆದಾರನಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
2009ರಲ್ಲಿ ಗಂಗಾವತಿ-ಹೊಸಪೇಟೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಹಂತದಲ್ಲಿದ್ದಾಗ ಕುಸಿದು ಬಿದ್ದು 8 ಜನ ಸಾವಿಗೀಡಾಗಿದ್ದರು. ಈ ಸಂಬಂಧ ಹೈದರಾಬಾದ್ ಮೂಲದ ಪ್ರಧಾನ ಗುತ್ತಿಗೆದಾರ ಬಿ.ಎಸ್.ರೆಡ್ಡಿಗೆ 21.60 ಲಕ್ಷ ರೂಪಾಯಿ ದಂಡ ಹಾಗೂ ಸೂಪರ್ ವೈಸರ್ ಆಗಿದ್ದ ಪ್ರತಾಪ್ ರೆಡ್ಡಿಗೆ ದಂಡ ಹಾಗೂ ವಿವಿಧ ಐಪಿಸಿ ಕಲಂಗಳಡಿ ಪ್ರತ್ಯೇಕ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದರೆ ಬಿ.ಎಸ್.ರೆಡ್ಡಿಗೆ ಐಪಿಸಿ ಕಲಂ 336ರಡಿ 2 ತಿಂಗಳು, ಕಲಂ 337ರಡಿ 3 ತಿಂಗಳು, ಕಲಂ 338ರಡಿ 6 ತಿಂಗಳು ಹಾಗೂ ಕಲಂ 304(A)ರಡಿ 1 ವರ್ಷ ಆರು ತಿಂಗಳು ಸಜೆ ವಿಧಿಸಲಾಗಿದೆ. ಸೂಪರ್ ವೈಸರ್ ಪ್ರತಾಪ ರೆಡ್ಡಿಗೆ ಕಲಂ 336ರಡಿ ಎರಡು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದೆ.