ಕರ್ನಾಟಕ

karnataka

ETV Bharat / state

ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್​ ತೆರವಿಗೆ ಹೈಕೋರ್ಟ್​ ತಡೆಯಾಜ್ಞೆ: ಮಾಲೀಕರಿಗೆ ತಾತ್ಕಾಲಿಕ ರಿಲೀಫ್ - ಫೆ. 24ರವರೆಗೆ ಮಧ್ಯಂತರ ತಡೆ

ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್​ ತೆರವಿಗೆ ಸುಪ್ರೀಂಕೋರ್ಟ್​ ನೀಡಿದ್ದ ಆದೇಶಕ್ಕೆ ಹೈಕೋರ್ಟ್​ ತಾತ್ಕಾಲಿಕ ತಡೆ ನೀಡಿದೆ.

unauthorized-resort-clearance-at-virupapur-by-high-court
ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್​ ತೆರವಿಗೆ ಹೈಕೋರ್ಟ್​ ತಡೆಯಾಜ್ಞೆ

By

Published : Feb 16, 2020, 2:07 PM IST

ಗಂಗಾವತಿ: ತಾಲ್ಲೂಕಿನ ವಿರುಪಾಪುರ ಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್​ ತೆರವಿಗೆ ಸುಪ್ರೀಂಕೋರ್ಟ್​ ನೀಡಿದ್ದ ಆದೇಶಕ್ಕೆ ಬೆಂಗಳೂರಿನ ಹೈಕೋರ್ಟ್​ ತಾತ್ಕಾಲಿಕ ತಡೆ ನೀಡಿದೆ. ಫೆ. 24ರವರೆಗೆ ಮಧ್ಯಂತರ ತಡೆ ನೀಡಿದ್ದರಿಂದ ರೆಸಾರ್ಟ್​ ಮಾಲೀಕರು ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.

ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್​ ತೆರವಿಗೆ ಹೈಕೋರ್ಟ್​ ತಡೆಯಾಜ್ಞೆ

ಒಂದು ದಶಕದಷ್ಟು ಹಳೆಯದಾದ ಈ ಪ್ರಕರಣ, ಕಳೆದ ಮೂರು ವರ್ಷದ ಹಿಂದಷ್ಟೆ ಸುಪ್ರೀಂಕೋರ್ಟ್​ವರೆಗೂ ಹೋಗಿತ್ತು. ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ ಕೋರ್ಟ್​, ರೆಸಾರ್ಟ್​ ಮಾಲೀಕರ ವಾದವನ್ನು ತಳ್ಳಿಹಾಕಿ, ಎಲ್ಲಾ ರೆಸಾರ್ಟ್​ಗಳನ್ನು ತೆರವು ಮಾಡುವಂತೆ ಫೆ.11ರಂದು ಆದೇಶ ಜಾರಿ ಮಾಡಿತ್ತು.

ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್​ ತೆರವಿಗೆ ಹೈಕೋರ್ಟ್​ ತಡೆಯಾಜ್ಞೆ

ಆದರೆ ಸುಪ್ರಿಂಕೋರ್ಟ್​ ತೀರ್ಪಿಗೆ ತಡೆ ನೀಡುವಂತೆ ಇಲ್ಲಿನ ಕೆಲ ಮಾಲೀಕರು ರಾಜ್ಯ ಹೈಕೋರ್ಟ್​ ಮೊರೆ ಹೋಗಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಫೆ.24ರವರೆಗೆ ತೆರವು ಮಾಡದಂತೆ ಅಧಿಕಾರಿಗಳಿಗೆ ಆದೇಶ ಮಾಡಿದೆ.

ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್​ ತೆರವಿಗೆ ಹೈಕೋರ್ಟ್​ ತಡೆಯಾಜ್ಞೆ

ABOUT THE AUTHOR

...view details