ಕರ್ನಾಟಕ

karnataka

ETV Bharat / state

ದುಶ್ಚಟಕ್ಕೆ ದಾಸರಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ - ಮಾದಕ ವ್ಯಸನಿಗಳು

ಮಾರ್ಚ್ 15ರಂದು ಮಂಜುಳಾ ಸಂಗಯ್ಯ ಹಿರೇಮಠ ಎಂಬುವರ ಮನೆಯಲ್ಲಿ ಹಾಡಹಗಲೇ ಬಾಗಿಲಿಗೆ ಹಾಕಿದ್ದ ಬೀಗ ಮುರಿದು 65,000 ರೂ. ಕದ್ದೊಯ್ದಿದ್ದರು. ಬಳಿಕ ಮನೆ ಮಾಲೀಕರು ಕಳ್ಳತನ ದೂರು ದಾಖಲಿಸಿದ್ದರು.

two-young-man-arrested-for-theft-in-home-at-kushtagi
ದುಶ್ಚಟಕ್ಕೆ ದಾಸರಾಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರು ಅಂದರ್

By

Published : Mar 19, 2021, 8:49 PM IST

ಕುಷ್ಟಗಿ (ಕೊಪ್ಪಳ):ದುಶ್ಚಟದ ದಾಸರಾಗಿದ್ದ ಇಬ್ಬರು ಯುವಕರು ಹಣಕ್ಕಾಗಿ ಕಳ್ಳತನದ ದಾರಿ ಹಿಡಿದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಕುಷ್ಟಗಿ ಪಟ್ಟಣದ ದರ್ಗಾದ ಬಳಿಯ ಮನೆಯಲ್ಲಿ ಕಳವು ಮಾಡಿದ್ದ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹುನಗುಂದ ಪಟ್ಟಣದ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಶಿವಾನಂದ ಗದ್ದಿ, ಕುಷ್ಟಗಿಯ ಕುಮಾರ್ ಲಕ್ಷ್ಮಣ್ ಬಂಧಿತರು. ಇವರಿಂದ 50 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಹಣಕಾಗಿ ಕನ್ನ ಹಾಕಿದ ಖದೀಮರು

ಮಾರ್ಚ್ 15ರಂದು ಮಂಜುಳಾ ಸಂಗಯ್ಯ ಹಿರೇಮಠ ಎಂಬುವರ ಮನೆಯ ಬೀಗ ಮುರಿದು 65,000 ರೂ. ಕದ್ದೊಯ್ದಿದ್ದರು. ಬಳಿಕ ಮನೆ ಮಾಲೀಕರು ಕಳ್ಳತನ ದೂರು ದಾಖಲಿಸಿದ್ದರು.

ಮಾದಕ ವಸ್ತು ವ್ಯಸನಿಗಳಾಗಿರುವ ಇಬ್ಬರು ತಮ್ಮ ದುಶ್ಚಟಗಳ ಈಡೇರಿಸಿಕೊಳ್ಳಲು ಕಳ್ಳತನದ ಹಾದಿ ಹಿಡಿದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:13 ಪ್ರಕರಣಗಳಲ್ಲಿ ಭಾಗಿ: ಇಬ್ಬರು ಕುಖ್ಯಾತ ದರೋಡೆಕೋರರ ಬಂಧನ

ABOUT THE AUTHOR

...view details