ಗಂಗಾವತಿ:ಲಿಂಗತ್ವ ಸಮಸ್ಯೆ ಕೊರತೆಯನ್ನು ಮೆಟ್ಟಿನಿಂತು ಸ್ವಾವಲಂಬಿ ಜೀವನದ ಮೂಲಕ ಬದುಕು ರೂಪಿಸಿಕೊಂಡು ತಮ್ಮದೇ ಸಮುದಾಯದ ಇತರಿಗೆ ಮಾದರಿಯಾದ ಗಂಗಾವತಿ ತಾಲೂಕಿನ ಬಸವಪಟ್ಟಣದ ಇಬ್ಬರು ಮಂಗಳಮುಖಿಯರು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಮಂಗಳಮುಖಿಯರಿಬ್ಬರು ರಾಜ್ಯದ ತಮ್ಮ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ನರೇಗಾ ಯೋಜನೆಯಡಿ ಕೆಲಸ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಂಡವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ನೀಡುವ ರಾಜ್ಯಮಟ್ಟದ ಶ್ರಮ ಚೇತನ ಪ್ರಶಸ್ತಿಯನ್ನು ಬಸವಪಟ್ಟಣದ ಶರಣಮ್ಮ ಮತ್ತು ಹುಲಿಗೆಮ್ಮ ಎಂಬ ಮಂಗಳಮುಖಿಯರಿಗೆ ನೀಡಲಾಗಿದೆ.
ಬಾಗಲಕೋಟೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಲಿಂಗತ್ವ ಅಲ್ಪಸಂಖ್ಯಾತರ ಶ್ರಮ ಚೇತನ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಶಿಲ್ಪಾನಾಗ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.