ಕೊಪ್ಪಳ: ಸಚಿವ ಸ್ಥಾನದ ಅಕಾಂಕ್ಷಿಗಳಾಗಿದ್ದ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂರ್ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟು ಕೇವಲ ಎರಡು ಗಂಟೆಯಲ್ಲಿಯೇ ಸರ್ಕಾರ ಮರಳಿ ಪಡೆದಿದೆ.
ಕೊಪ್ಪಳ ಜಿಲ್ಲೆಗೆ ಕೈತಪ್ಪಿದ ಎರಡು ನಿಗಮ ಮಂಡಳಿ ಸ್ಥಾನ: ಬಿಜೆಪಿ ನಡೆಗೆ ಕಾರ್ಯಕರ್ತರ ಅಸಮಾಧಾನ - Corporation Board position
ನಿಗಮ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಕಗೊಳಿಸಿದ್ದ ಜಿಲ್ಲೆಯ ಇಬ್ಬರು ಶಾಸಕರ ಹೆಸರನ್ನು ಹಿಂಪಡೆಯುವ ಮೂಲಕ ರಾಜ್ಯ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಇಬ್ಬರು ಶಾಸಕರು, ಸಚಿವ ಸ್ಥಾನದ ಅಕಾಂಕ್ಷಿಗಳಾಗಿದ್ದರು. ಆದರೆ ಅಳೆದುತೂಗಿ ಯಡಿಯೂರಪ್ಪ ಸಚಿವ ಸಂಪುಟ ರಚಿಸಿದ್ದರು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಇದೇ ವೇಳೆ ಬಿಎಸ್ವೈ ಭರವಸೆ ನೀಡಿದ್ದರು. ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಮಾರನೇ ದಿನವೇ ಪರಣ್ಣ ಮುನವಳ್ಳಿಗೆ ರಾಜ್ಯ ಹಣಕಾಸು ಸಂಸ್ಥೆ ಮತ್ತು ಬಸವರಾಜ ದಢೇಸೂರ್ ಅವರಿಗೆ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ಹುದ್ದೆ ನೀಡಲಾಗಿತ್ತು.
ಆದೇಶ ಹೊರಬಿದ್ದ ಕೇವಲ ಎರಡು ಗಂಟೆಯಲ್ಲಿ ಕೊಪ್ಪಳ ಜಿಲ್ಲೆಯ ಈ ಇಬ್ಬರ ಆದೇಶವನ್ನ ಸರ್ಕಾರ ಹಿಂಪಡೆದಿದೆ. ಇದರಿಂದಾಗಿ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.