ಗಂಗಾವತಿ: ಇಲ್ಲಿನ ಸೂರ್ಯನಾಯಕನ ತಾಂಡಾದ ಬೆಟ್ಟದಲ್ಲಿ ಏಕಕಾಲಕ್ಕೆ ಎರಡು ಚಿರತೆಗಳು ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿವೆ.
ಸರ್ಕಾರಿ ಐಟಿಐ ಹಾಗೂ ಎಂಜಿನಿಯರಿಂಗ್ ಕಾಲೇಜು ಸಮೀಪದ ಸೂರ್ಯನಾಯಕನ ತಾಂಡದ ಬಳಿಯ ಬೆಟ್ಟದಲ್ಲಿ ಈ ಜೋಡಿ ಚಿರತೆ ಕಾಣಿಸಿದ್ದು, ದೂರದಿಂದಲೇ ಯುವಕನೋರ್ವ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾನೆ. ಬೆಟ್ಟದ ಪೊಟರೆಯಿಂದ ಹೊರ ಬರುವ ಚಿರತೆ, ಬೆಟ್ಟದ ತುದಿಯಲ್ಲಿ ನಿಂತಿರುವ ಮತ್ತೊಂದು ಚಿರತೆಯ ಸನಿಹಕ್ಕೆ ಹೋಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.