ಗಂಗಾವತಿ (ಕೊಪ್ಪಳ) :ಕನಕಗಿರಿ ತಾಲೂಕಿನ ಅಡವಿಭಾವಿ ಗ್ರಾಮದ ಸಮೀಪದಲ್ಲಿರುವ ಬೆಟ್ಟದಲ್ಲಿ ಮೂರು ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಒಂದು ಕಡೆ ಕುತೂಹಲ ಮತ್ತೊಂದು ಕಡೆ ಆತಂಕ ಮೂಡಿಸಿವೆ. ಗಂಗಾವತಿ ಹಾಗೂ ಕನಕಗಿರಿ ಸುತ್ತಲೂ ಇತ್ತೀಚೆಗೆ ವನ್ಯಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಬೆಟ್ಟದ ತುದಿಯಲ್ಲಿ ಎರಡು ಚಿರತೆ ಮರಿಗಳು ಪ್ರತ್ಯಕ್ಷ ಬೆಟ್ಟದ ಪ್ರದೇಶದಲ್ಲಿ ಚಿರತೆ ಮರಿಗಳು ಓಡಾಡುತ್ತಿರುವುದನ್ನು ಗಮನಿಸಿದ ರೈತರು ಕೂಡಲೇ ಗ್ರಾಮದ ಯುವಕರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೆಲ ಯುವಕರು ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
ಆದರೆ, ಚಿರತೆ ಮರಿಗಳು ಕಾಣಿಸಿಕೊಂಡಿವೆ ಎಂದು ಹೇಳಲಾಗುತ್ತಿರುವ ಸ್ಥಳದಲ್ಲಿ ಕೆಲ ಕಾಗೆಗಳು ಅಸಹಜವಾಗಿ ಗುಂಪು ಗುಂಪಾಗಿ ಹಾರಾಟ ಮಾಡುತ್ತಿವೆ. ಇದು ಚಿರತೆ ಮರಿಗಳು ಓಡಾಡುತ್ತಿವೆ ಎನ್ನುವುದಕ್ಕೆ ಪುಷ್ಠಿ ನೀಡುತ್ತದೆ.
ಓದಿ:ನಡು ರಸ್ತೆಯಲ್ಲಿ 3 ಚಿರತೆಗಳು ಪ್ರತ್ಯಕ್ಷ: ಆತಂಕಗೊಂಡ ಪ್ರಯಾಣಿಕರು
ಕಾಗೆಗಳು ಸಹಜವಾಗಿ ಒಂಟಿಯಾಗಿ ಸಂಚರಿಸುತ್ತವೆ. ಏನಾದರೂ ಅಪಾಯ, ಅನಿರೀಕ್ಷಿತ ಘಟನೆಗಳು ಕಂಡಾಗ ಮಾತ್ರ ಗುಂಪಾಗಿ ಹಾರಾಟ ಮಾಡಿ ಶಬ್ದ ಮಾಡುವ ಮೂಲಕ ಜನರ ಗಮನ ಸೆಳೆಯುತ್ತವೆ. ಗ್ರಾಮದ ಬೆಟ್ಟದಲ್ಲಿ ಹಲವು ದಿನಗಳಿಂದ ಚಿರತೆಗಳು ಇವೆ. ಆದರೆ, ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಗ್ರಾಮದ ರೈತ ಶಶಿಧರ ನಾಯಕ ಹೇಳಿದ್ದಾರೆ.