ಗಂಗಾವತಿ(ಕೊಪ್ಪಳ): ಚಿರತೆ ದಾಳಿ ಮಾಡಿ ಎರಡು ಶ್ವಾನಗಳನ್ನು ಕತ್ತು ಸೀಳಿ ಕೊಂದು ಹಾಕಿರುವ ಘಟನೆ ಗಂಗಾವತಿ-ಆನೆಗೊಂದಿ ರಸ್ತೆಯ ಕಣಿವೆ ಆಂಜನೇಯ ದೇವಸ್ಥಾನದ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ. ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಚಿರತೆಗಳ ಹಾವಳಿ ಅಧಿಕವಾಗಿದ್ದು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿವೆ.
ಗಂಗಾವತಿ: ಚಿರತೆ ದಾಳಿಗೆ ಎರಡು ಶ್ವಾನಗಳು ಬಲಿ - ETv Bharat kannada news
ಗಂಗಾವತಿಯ ಕಣಿವೆ ಆಂಜನೇಯ ದೇವಸ್ಥಾನದ ಬಳಿ ಚಿರತೆ ದಾಳಿ ಮಾಡಿ ಎರಡು ಶ್ವಾನಗಳನ್ನು ಕೊಂದು ಹಾಕಿದೆ.

ಚಿರತೆ ದಾಳಿಗೆ ಎರಡು ಶ್ವಾನಗಳು ಬಲಿ
ಚಿರತೆ ದಾಳಿ ಮಾಡಿದ ಸ್ಥಳದಿಂದ ಕೇವಲ ಹತ್ತಾರು ಅಡಿ ದೂರದಲ್ಲಿರುವ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಹನುಮ ಮಾಲೆ ಧರಿಸಿರುವ ಹಲವು ಭಕ್ತರು ವಾಸ್ತವ್ಯ ಹೂಡಿದ್ದರು.
ಇದನ್ನೂ ಓದಿ :ಹಸು ಕೊಂದು ಎಳೆದೊಯ್ದ ಚಿರತೆಯ ದೃಶ್ಯ ಸೆರೆ: ಆತಂಕದಲ್ಲಿ ಗ್ರಾಮಸ್ಥರು
Last Updated : Nov 27, 2022, 1:40 PM IST