ಕೊಪ್ಪಳ: ಕುಷ್ಟಗಿ ತಾಲೂಕಿನ ಜೆ. ರಾಂಪೂರ ಗ್ರಾಮದ ರೈತ ಗುಂಡಪ್ಪ ಅಮರಪ್ಪ ಮೆಣೇದಾಳ ಎಂಬುವವರ ಜಮೀನಿನ ಮರವೊಂದರಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೊಪ್ಪಳ: ನೇಣುಬಿಗಿದ ಸ್ಥಿತಿಯಲ್ಲಿ ಯುವಕ-ಯುವತಿಯ ಮೃತದೇಹ ಪತ್ತೆ - ಕೊಪ್ಪಳ ಲೆಟೆಸ್ಟ್ ನ್ಯೂಸ್
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೆ. ರಾಂಪೂರ ಗ್ರಾಮದ ಜಮೀನಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕ-ಯುವತಿಯ ಮೃತದೇಹಗಳು ಪತ್ತೆಯಾಗಿವೆ.

ಕೊಪ್ಪಳದಲ್ಲಿ ಯುವಕ-ಯುವತಿಯ ಮೃತ ದೇಹಗಳು ಪತ್ತೆ
ತಾವರಗೇರಾ ಸಮೀಪದ ಮಾದಾಪುರ ಗ್ರಾಮದ ವಿರುಪಾಕ್ಷಿಗೌಡ (20), ಹುಲಿಗೆಮ್ಮ (18) ಮೃತರು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಬೇರೆ ಬೇರೆ ಜಾತಿಯವರಾದ ಕಾರಣ ಇಬ್ಬರ ಮದುವೆಗೆ ಕುಟುಂಬದರಿಂದ ಒಪ್ಪಿಗೆ ಇರಲಿಲ್ಲ. ಇದರಿಂದ ನೊಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.