ಕರ್ನಾಟಕ

karnataka

ETV Bharat / state

ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು - ಕೊಪ್ಪಳ ಲೇಟೆಸ್ಟ್​ ನ್ಯೂಸ್

ಕೊಪ್ಪಳ ತಾಲೂಕಿನ ಕೆರಹಳ್ಳಿ ಗ್ರಾಮದಲ್ಲಿ ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Koppal
ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

By

Published : May 6, 2021, 8:51 AM IST

ಕೊಪ್ಪಳ:ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಕೆರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

ಕಿಶೋರ್ ಶಂಕ್ರಪ್ಪ ಶಿಳ್ಳಿಕ್ಯಾತರ್ (11) ಮತ್ತು ಗವಿಸಿದ್ದಪ್ಪ ಗುರುರಾಜ್ ಬೋವಿ (10) ಮೃತಪಟ್ಟ ಬಾಲಕರು. ಇವರಿಬ್ಬರು ಬುಧವಾರ ಸಂಜೆ ಕೆರೆಯಲ್ಲಿ ಈಜಾಡಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಗ್ರಾಮಸ್ಥರು ಬಾಲಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಓದಿ:ಊರು ತಲುಪುವ ಮುನ್ನ ಪತಿ ತೀರಿಕೊಂಡ... ಮಾರ್ಗ ಮಧ್ಯೆ ಶವದ ಜೊತೆ ಮಹಿಳೆಯನ್ನ ಇಳಿಸಿದ ಟ್ಯಾಕ್ಸಿ ಚಾಲಕ

ABOUT THE AUTHOR

...view details