ಗಂಗಾವತಿ:ತುಂಗಭದ್ರಾ ಜಲಾಶಯದ ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮ, ಭವಿಷ್ಯತ್ತಿನ ಚಿಂತನೆಗಳ ಬಗ್ಗೆ ಚರ್ಚಿಸಲು ಇಲ್ಲಿನ ಸೆಕ್ರೆಟ್ರಿ ಹೌಸ್ನಲ್ಲಿ ಇಂದು ಸಭೆ ಕರೆಯಲಾಗಿದೆ.
ತುಂಗಭದ್ರಾ ಸಮಸ್ಯೆ: ಸಭೆ ಕರೆದ ಸಮಿತಿ - Tungabhadra Problem
ತುಂಗಭದ್ರಾ ಜಲಾಶಯದ ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳು ಬಗ್ಗೆ ಚರ್ಚಿಸಲು ಸಭೆ ಕರೆದ ತುಂಗಭದ್ರಾ ಜಲಾಶಯ ಅಭಿವೃದ್ಧಿ ಹೋರಾಟ ಸಮಿತಿ.
ತುಂಗಭದ್ರಾ ಸಮಸ್ಯೆ: ಸೆಕರೆಟ್ರಿ ಹೌಸ್ನಲ್ಲಿ ರೈತರ ಸಭೆ
ತುಂಗಭದ್ರಾ ಜಲಾಶಯ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಸಭೆ ಆಯೋಜಿಸಲಾಗಿದ್ದು, ಕೊಪ್ಪಳ ಜಿಲ್ಲೆಯ ರೈತರು ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದು ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ ತಿಳಿಸಿದ್ದಾರೆ.
ಜಲಾಶಯವನ್ನು ಅವಲಂಬಿಸಿರುವ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ರೈತರನ್ನು ಆಯಾ ಜಿಲ್ಲೆಯಲ್ಲಿ ಸಭೆ ಕರೆದು, ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದರು.