ಕರ್ನಾಟಕ

karnataka

ETV Bharat / state

'ನವಲಿ ಸಮನಾಂತರ ಜಲಾಶಯಕ್ಕೆ ಆಂಧ್ರ, ತೆಲಂಗಾಣ ಸರ್ಕಾರಗಳು ಹಣ ನೀಡಬೇಕು' - ಶಾಸಕ ಬಸವರಾಜ ದಢೇಸುಗೂರು

ಒಟ್ಟು 12 ಸಾವಿರ ಕೋಟಿ ರೂಪಾಯಿ ಮೊತ್ತದ ಮೆಗಾ ಪ್ರಾಜೆಕ್ಟ್ ಇದಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 1,200 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮುಂದಿನ ದಿನಗಳಲ್ಲಿ ಆಂಧ್ರ, ತೆಲಂಗಾಣ ಸರ್ಕಾರಗಳು ಅನುದಾನ ನೀಡಬೇಕಿದೆ..

MLA Basavaraj Dadesuguru
ಶಾಸಕ ಬಸವರಾಜ ದಢೇಸುಗೂರು

By

Published : Jun 27, 2021, 5:11 PM IST

ಗಂಗಾವತಿ :ಕನಕಗಿರಿತಾಲೂಕಿನ ನವಲಿ ಬಳಿ ನಿರ್ಮಾಣವಾಗಲಿರುವ 55 ಟಿಎಂಸಿ ಸಾಮರ್ಥ್ಯದ ಸಮನಾಂತರ ಜಲಾಶಯಕ್ಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಅನುದಾನ ನೀಡಬೇಕಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಈ ಬಗ್ಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ಹೇಗೆ ಅಂತಾರಾಜ್ಯ ನೀರು ಹಂಚಿಕೆ ಸೂತ್ರಕ್ಕೆ ಒಳಪಡುತ್ತದೆಯೋ, ಹಾಗೆಯೇ ನವಲಿಯ ಸಮನಾಂತರ ಜಲಾಶಯವೂ ಮೂರು ರಾಜ್ಯಗಳ ಅನುದಾನಕ್ಕೆ ಒಳಪಡುತ್ತದೆ.

ಶಾಸಕ ಬಸವರಾಜ ದಢೇಸುಗೂರು

ಹಾಗಾಗಿ, ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿಂತೆ ಈಗಾಗಲೇ ಮೂರು ರಾಜ್ಯಗಳ ಸಿಎಂ, ಜಲಸಂಪನ್ಮೂಲ ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ. ಆಗಸ್ಟ್​​ನಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಓದಿ : ಭದ್ರಾ ಜಲಾಶಯಕ್ಕೆ ಅಪಾಯ ತಂದಿಟ್ಟಿತೆ ಕಳಪೆ ಕಾಮಗಾರಿ?

ಒಟ್ಟು 12 ಸಾವಿರ ಕೋಟಿ ರೂಪಾಯಿ ಮೊತ್ತದ ಮೆಗಾ ಪ್ರಾಜೆಕ್ಟ್ ಇದಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 1,200 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮುಂದಿನ ದಿನಗಳಲ್ಲಿ ಆಂಧ್ರ, ತೆಲಂಗಾಣ ಸರ್ಕಾರಗಳು ಅನುದಾನ ನೀಡಬೇಕಿದೆ ಎಂದರು.

ABOUT THE AUTHOR

...view details