ಕರ್ನಾಟಕ

karnataka

ETV Bharat / state

ನಕಲಿ ದಾಖಲೆ ಸಲ್ಲಿಸಿ ಸೇನೆ‌ಗೆ ಸೇರಲು ಯತ್ನಿಸಿದ್ದ ಯುವಕ: ಮುಂದೇನಾಯ್ತು ಗೊತ್ತಾ? - ಕೊಪ್ಪಳದ ಭೂಸೇನಾ ನೇಮಕಾತಿ ರ‌್ಯಾಲಿ

ನಕಲಿ ದಾಖಲೆ ಸಲ್ಲಿಸಿ ಸೇನೆ‌ ಸೇರಲು ಮುಂದಾಗಿದ್ದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭೂಸೇನಾ ನೇಮಕಾತಿ ರ‌್ಯಾಲಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.

ನಕಲಿ ದಾಖಲೆ ಸಲ್ಲಿಸಿ ಸೇನೆ‌ಗೆ ಸೇರಲು ಯತ್ನಸಿದ ಯುವಕ

By

Published : Nov 17, 2019, 9:55 AM IST

ಕೊಪ್ಪಳ: ನಕಲಿ ದಾಖಲೆ ಸಲ್ಲಿಸಿ ಸೇನೆ‌ ಸೇರಲು ಮುಂದಾಗಿದ್ದ ಯುವಕನೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭೂಸೇನಾ ನೇಮಕಾತಿ ರ‌್ಯಾಲಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.

ರಾಜಸ್ಥಾನ ಮೂಲದ ರಾಜೇಂದ್ರ ಸಿಂಗ್ ಎಂಬ ಯುವಕ, ನಕಲಿ ದಾಖಲೆ ನೀಡಿ ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಸ್ಥಳೀಯ ವಿಳಾಸ ನೀಡಿ ನೇಮಕಾತಿ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ. ಸೇನಾ ತಂಡ ನಡೆಸಿದ ದಾಖಲೆಗಳ ಪರಿಶೀಲನೆ ವೇಳೆಯಲ್ಲಿ ರಾಜೇಂದ್ರಸಿಂಗ್ ನಕಲಿ ದಾಖಲೆಗಳ ನೀಡಿರುವುದು ಬೆಳಕಿಗೆ ಬಂದಿದ್ದು, ಈತನನ್ನು ಕೊಪ್ಪಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details