ಕರ್ನಾಟಕ

karnataka

ETV Bharat / state

ಲಾರಿ ಚಾಲಕನ ಅಜಾಗರೂಕತೆ: ಕೂದಲೆಳೆ ಅಂತರದಲ್ಲಿ ಬೈಕ್​​ ಸವಾರರು ಪಾರು - ಕುಷ್ಟಿಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಲಾರಿ

ಚಾಲಕನ ಅಜಾಗರೂಕತೆಯಿಂದ ಮುಂದೆ ಹೊರಟಿದ್ದ ಬೈಕ್​ ಲಾರಿ ಡಿಕ್ಕಿ ಹೊಡೆದ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆಯಿತು. ಅದೃಷ್ಟವಶಾತ್​​ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

truck-driver-recklessness-bike-riders-escape-form-accident-in-kustagi
ತಪ್ಪಿದ ಬೈಕ್​ ಮತ್ತು ಲಾರಿ ಅಪಘಾತ

By

Published : Sep 10, 2020, 8:48 PM IST

ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದ ಹೆದ್ದಾರಿ ಮೇಲ್ಸೇತುವೆ ಬಳಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಲಾರಿ ಚಾಲಕನ ನಿರ್ಲಕ್ಷದಿಂದ ಸಂಭವಿಸುತ್ತಿದ್ದ ಭೀಕರ ಅಪಘಾತ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಸ್ಥಳೀಯರು ಲಾರಿ ಚಾಲಕನನ್ನು ತಾರಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬಂದ ಟ್ರಕ್​​ ಚಾಲಕ ಸೂಚನೆ ನೀಡದೆ ಏಕಾಏಕಿ ಸಿಂಧನೂರು ರಸ್ತೆಯತ್ತ ಲಾರಿಯನ್ನು ಟರ್ನ್​ ಮಾಡಿದ್ದಾನೆ. ಪರಿಣಾಮ ಮುಂದೆ ಹೊರಟಿದ್ದ ತಾವರಗೇರಾ ಮೂಲದ ವ್ಯಕ್ತಿಯ ಬೈಕ್​​ಗೆ ಡಿಕ್ಕಿ ಹೊಡೆದಿದೆ.

ತಪ್ಪಿದ ಬೈಕ್​ ಮತ್ತು ಲಾರಿ ಅಪಘಾತ

ಅದೃಷ್ಟವಶಾತ್ ಅವಘಡದಲ್ಲಿ ಬೈಕ್​​ ಸವಾರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಹಿಂಬದಿ ಸವಾರನಿಗೆ ಸಣ್ಣ ಗಾಯಗಳಾಗಿವೆ. ಬೈಕ್​ ಸವಾರಿಬ್ಬರು ಪಿಯುಸಿ ಪೂರಕ ಪರೀಕ್ಷೆ ಮುಗಿಸಿಕೊಂಡು ತಾವರಗೇರಾ ಕಡೆ ಹೋರಟಿದ್ದರು ಎನ್ನಲಾಗಿದೆ. ನಂತರ ಲಾರಿ ಚಾಲಕನನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಸರ್ವಿಸ್​​ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದ್ದು, ಹೆದ್ದಾರಿ ಸಂಪರ್ಕಿಸುವ ಕ್ರಾಸ್​​ನಲ್ಲಿ ರೋಡ್​ ಬ್ರೇಕರ್​ ಅಳವಡಿಸಿಲ್ಲ. ಹೀಗಾಗಿ ಇಂತಹ ಅವಘಡಗಳು ನಡೆಯುತ್ತಿದ್ದು, ರೋಡ್​​ ಬ್ರೇಕರ್​ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದರು.

ABOUT THE AUTHOR

...view details