ಕೊಪ್ಪಳ:ಪ್ರೀತಿಸಿ ಮದುವೆಯಾದ ಜೋಡಿಗೆ ಯುವತಿ ಪೋಷಕರೇ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ವಿರೋಧ, ರಕ್ಷಣೆ ಕೋರಿ ಪೊಲೀಸರಿಗೆ ಮೊರೆ - ಕೊಪ್ಪಳ ಎಸ್ಪಿ ಕಚೇರಿ
ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಯುವಕ ಮತ್ತು ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
![ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ವಿರೋಧ, ರಕ್ಷಣೆ ಕೋರಿ ಪೊಲೀಸರಿಗೆ ಮೊರೆ](https://etvbharatimages.akamaized.net/etvbharat/prod-images/768-512-4909755-thumbnail-3x2-vish.jpg)
ಕುಷ್ಟಗಿಯ ರಮೇಶ್ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗೋನಾಳ ಗ್ರಾಮದ ಯುವತಿ ಸಂಗೀತಾ ಎಂಬ ಪ್ರೇಮಿಗಳು ಈಗ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ. ಗ್ಯಾರೇಜ್ ಹೊಂದಿರುವ ರಮೇಶ್ ಹಾಗೂ ಸಂಗೀತಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಇಬ್ಬರೂ ಬೇರೆ ಜಾತಿಯವರಾಗಿದ್ದರಿಂದ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಜುಲೈನಲ್ಲಿ ದೇವಸ್ಥಾನವೊಂದರಲ್ಲಿ ಇವರು ಮದುವೆಯಾಗಿದ್ದು, ಯುವತಿಯ ಮನೆಯವರು ಬಂದು ಯುವತಿಯ ಮೇಲೆ ಹಲ್ಲೆ ನಡೆಸಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಇಂದು ಮತ್ತೆ ಯುವತಿ ಮನೆ ಬಿಟ್ಟು ಬಂದಿದ್ದು ತಮಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾಳೆ. ತಮ್ಮಿಬ್ಬರ ಕುಟುಂಬದಿಂದಲೂ ನಮಗೆ ತೊಂದರೆ ಇದೆ. ತಾವು ವಯಸ್ಕರಾಗಿದ್ದು ಜೊತೆಯಲ್ಲಿ ಬಾಳುತ್ತೇವೆ ಎಂದು ಹೇಳುತ್ತಾ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.