ಕೊಪ್ಪಳ: ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೊಟ್ಟಮೊದಲ ತ್ರಿವಳಿ ತಲಾಖ್ ಪ್ರಕರಣ ಸೆಪ್ಟಂಬರ್ 18 ರಂದು ದಾಖಲಾಗಿದೆ. ಗಜೇಂದ್ರಗಡ ಮೂಲದ ಸೈಯದ್ ವಾಹಿದ್ ಅತ್ತರ್ ವಿರುದ್ಧ ಸೈಯದ್ ಪತ್ನಿ ಖಾಲೀದಾ ಬೇಗಂ ದೂರು ದಾಖಲಿಸಿದ್ದಾರೆ.
ಖಾಲೀದಾ ಬೇಗಂ ಹಾಗು ವಾಹಿದ್ ಮಧ್ಯೆ ಕೌಟುಂಬಿಕ ಕಲಹವಿದ್ದ ಹಿನ್ನೆಲೆಯಲ್ಲಿ. 2021 ರಲ್ಲಿ ಕೊಪ್ಪಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಆ ವಿಚಾರಣೆ ಹಿನ್ನೆಲೆಯಲ್ಲಿ ನ್ಯಾಯಲಕ್ಕೆ ಆಗಮಿಸಿದಾಗ ಸೆಪ್ಟೆಂಬರ್ 15 ರಂದು ಸೈಯದ್ ವಾಹಿದ್ ಷರಿಯತ್ ಕಾಯ್ದೆ ಅನ್ವಯ ಮೂರು ಬಾರಿ ತಲಾಖ್ ಎಂದು ಹೇಳಿದ್ದಾನೆ.