ಗಂಗಾವತಿ (ಕೊಪ್ಪಳ): ಚಂದನವನದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ವರ್ಷ ಕಳೆದಿದೆ. ಆದರೂ ಅಭಿಮಾನಿಗಳಲ್ಲಿ ನೆಚ್ಚಿನ ನಟನ ಮೇಲಿನ ಪ್ರೀತಿ, ವಿಶ್ವಾಸ, ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಭಾನುವಾರ ನಗರದಲ್ಲಿ ನೂರಾರು ವಿದ್ಯಾರ್ಥಿಗಳು ನಮನ ಸಲ್ಲಿಸಿದರು.
ನಗರದ ಸೆಂಟ್ಪಾಲ್ ವಿದ್ಯಾಸಂಸ್ಥೆಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣಿಮಾ ಚಿತ್ರಮಂದಿರದಲ್ಲಿ ಗಂಧದಗುಡಿ ಸಿನಿಮಾ ನೋಡಿದರು. ಇದಕ್ಕೂ ಮೊದಲು ಚಿತ್ರದ ಬ್ಯಾನರ್ ಮುಂದೆ ಪುನೀತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜಿಸಿದರು. ಹಾಸ್ಯ ಭಾಷಣಕಾರ ನರಸಿಂಹಜೋಶಿ ಈ ವೇಳೆ ಉಪಸ್ಥಿತರಿದ್ದರು.