ಗಂಗಾವತಿ (ಕೊಪ್ಪಳ):ಗಾಳಿ, ಮಳೆ ಏನೂ ಇಲ್ಲದಿದ್ದರೂ ಸಾರ್ವಜನಿಕ ಸ್ಥಳದಲ್ಲಿರುವ ಬೃಹತ್ ಮರವೊಂದು ಧರೆಗುರುಳಿದ್ದು ಕೂದಲೆಳೆಯ ಅಂತರದಲ್ಲಿ ಅಪಾಯ ತಪ್ಪಿರುವ ಘಟನೆ ನಗರದ ನೀಲಕಂಠೇಶ್ವರ ವೃತ್ತದ ಸಮೀಪ ಸಂಭವಿಸಿದೆ.
ದಿಢೀರ್ ಧರೆಗುರುಳಿದ ಬೃಹತ್ ಮರ: ತಪ್ಪಿದ ಭಾರಿ ಅನಾಹುತ - koppal news
ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಒಂದು ಮಗು ಸೇರಿದಂತೆ ಮೂರು ಜನರು ಕ್ಷಣಾರ್ಧದಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ.
![ದಿಢೀರ್ ಧರೆಗುರುಳಿದ ಬೃಹತ್ ಮರ: ತಪ್ಪಿದ ಭಾರಿ ಅನಾಹುತ tree](https://etvbharatimages.akamaized.net/etvbharat/prod-images/768-512-7598581-747-7598581-1592038723360.jpg)
tree
ಧರೆಗುರುಳಿದ ಬೃಹತ್ ಮರ
ನೀಲಕಂಠೇಶ್ವರ ವೃತ್ತ ಹಾಗೂ ಪೀರಜಾದೆ ವೃತ್ತದ ಮಧ್ಯೆ ಇರುವ ಖಾಸಗಿ ನರ್ಸಿಂಗ್ ಹೋಂ ಬಳಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಒಂದು ಮಗು ಸೇರಿದಂತೆ ಮೂರು ಜನ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.
ಮರ ಉರುಳುತ್ತಿರುವಾಗ ಸಮೀಪದ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಹೀಗಾಗಿ ಮರ ಬೀಳುವ ರಭಸ ಕಡಿಮೆಯಾಗಿದ್ದು ಜನ ಅಪಾಯದಿಂದ ಪಾರಾಗಿದ್ದಾರೆ. ಇಡೀ ರಸ್ತೆಯ ಮೇಲೆ ಮರ ಉರುಳಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು.
Last Updated : Jun 13, 2020, 5:18 PM IST