ಕರ್ನಾಟಕ

karnataka

ETV Bharat / state

ಧಾರವಾಡದ ನಾರಾಯಣ ಹಾರ್ಟ್ ಸೆಂಟರ್​ನಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ - latest treatment without surgery news

ಜನ್ಮದಿಂದಲೇ ಹೃದಯ ಸಂಬಂಧಿ ಸಮಸ್ಯೆ ಇರುವ ಜಿಲ್ಲೆಯ ಕೊಪ್ಪಳ ಇಬ್ಬರು ಮಕ್ಕಳಿಗೆ ಧಾರವಾಡ  ಎಸ್.ಡಿ.ಎಂನ ನಾರಾಯಣ ಹಾರ್ಟ್ ಸೆಂಟರ್​ನಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದರೆ.

ಧಾರವಾಡದ ನಾರಾಯಣ ಹಾರ್ಟ್ ಸೆಂಟರ್​ನಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ

By

Published : Nov 14, 2019, 2:31 PM IST

ಕೊಪ್ಪಳ: ಜನ್ಮದಿಂದಲೇ ಹೃದಯ ಸಂಬಂಧಿ ಸಮಸ್ಯೆ ಇರುವ ಜಿಲ್ಲೆಯ ಇಬ್ಬರು ಮಕ್ಕಳಿಗೆ ಧಾರವಾಡ ಎಸ್.ಡಿ. ಎಂ ನ ನಾರಾಯಣ ಹಾರ್ಟ್​ ಸೆಂಟರ್​ನಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಧಾರವಾಡದ ನಾರಾಯಣ ಹಾರ್ಟ್ ಸೆಂಟರ್​ನಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ

ನಗರದ ಮೀಡಿಯಾ ಕ್ಲಬ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಧಾರವಾಡ ಎಸ್.ಡಿ.ಎಂನಲ್ಲಿರುವ ನಾರಾಯಣ ಹಾರ್ಟ್ ಸೆಂಟರ್​ನ ಹೃದಯರೋಗ ತಜ್ಞ ವೈದ್ಯ ಡಾ.ಅರುಣ್ ಕೆ. ಬಬ್ಲೇಶ್ವರ್, ಜಿಲ್ಲೆಯ ಇಬ್ಬರು ಮಕ್ಕಳು ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಗಳಾದ ರಂಧ್ರ, ವಾಲ್ವ್​ನಲ್ಲಿ ತಡೆ, ಉಸಿರಾಟದ ತೊಂದರೆಯಿಂದಾಗಿ ಬಳಲುತ್ತಿದ್ದರು. ಹೀಗೆ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳನ್ನು ವೈದ್ಯರ ಸಲಹೆ ಮೇರೆಗೆ ಅವರ ಪಾಲಕರು ಧಾರವಾಡದ ಎಸ್.ಡಿ.ಎಂನಲ್ಲಿರುವ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಮಕ್ಕಳನ್ನು ತಪಾಸಣೆ ನಡೆಸಿ ಅವರಿಗೆ ಸರ್ಜರಿ ಇಲ್ಲದೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಕ್ಕಳು ಆರೋಗ್ಯದಿಂದಿದ್ದಾರೆಂದು ಮಾಹಿತಿ ನೀಡಿದರು.

ಇನ್ನು, ಬಿಪಿಎಲ್, ಸೇರಿದಂತೆ ಸರ್ಕಾರ ನೀಡುವ ಯಾವುದೇ ಆರೋಗ್ಯ ಭಾಗ್ಯದ ಕಾರ್ಡುಗಳು ಇದ್ದರೆ ಉಚಿತವಾಗೇ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತೆ. ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮ ದರ್ಜೆಯ ಚಿಕಿತ್ಸೆ ಸಿಗುತ್ತಿದೆ ಎಂದು ಡಾ. ಅರುಣ್​ ತಿಳಿಸಿದರು.

ABOUT THE AUTHOR

...view details