ಗಂಗಾವತಿ (ಕೊಪ್ಪಳ):ಇಲ್ಲಿನ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಇದೀಗ ನಗರದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ.
ಗಾಂಧಿನಗರ ಸೀಲ್ ಡೌನ್: ಗಂಗಾವತಿಯಲ್ಲಿ ತಲೆನೋವಾದ ಟ್ರಾಫಿಕ್ ಸಮಸ್ಯೆ - ಗಾಂಧಿನಗರ
ಗಂಗಾವತಿಯ ಗಾಂಧಿನಗರವನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಕೆಲ ಭಾಗಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ.
ಗಂಗಾವತಿಯಲ್ಲಿ ತಲೆನೋವಾದ ಟ್ರಾಫಿಕ್ ಸಮಸ್ಯೆ
ನಗರದ ಪ್ರಮುಖ ರಸ್ತೆಯಾದ ದುರುಗಮ್ಮನ ದೇವಸ್ಥಾನದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಗಾಂಧಿನಗರ ಹೊಂದಿಕೊಂಡಿದೆ. ಹೀಗಾಗಿ ಗಾಂಧಿನಗರಕ್ಕೆ ನೇರ ಸಂಪರ್ಕ ಕಲ್ಪಿಸದಂತೆ ಅಧಿಕಾರಿಗಳು ಈ ಪ್ರಮುಖ ರಸ್ತೆಯನ್ನು ಸೀಲ್ ಡೌನ್ ಮಾಡಿದ್ದಾರೆ.
ಇದರಿಂದಾಗಿ ಕಿರಿದಾದ ಬವಸಣ್ಣ ವೃತ್ತ ಮಾರ್ಗದಲ್ಲಿ ನಿತ್ಯ ಸಾವಿರಾರು ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗಿ ವಾಹನ ಸವಾರರು ಪರದಾಡುವಂತಾಗಿದೆ.