ಕರ್ನಾಟಕ

karnataka

ETV Bharat / state

ಆನೆಗೊಂದಿ ಉತ್ಸವದಲ್ಲಿ ಪುರಾತನ ಕಾಲದ ಕ್ರೀಡೆಗಳಿಗೂ ಆದ್ಯತೆ: ಡಿಸಿ ಭರವಸೆ - ಕೊಪ್ಪಳ ಗಂಗಾವತಿ ಆನೆಗೊಂದಿ ಉತ್ಸವ ಸುದ್ದಿ

ಐತಿಹಾಸಿಕ ಆನೆಗೊಂದಿ ಉತ್ಸವದಲ್ಲಿ ಹಿಂದಿನ ಕಾಲದ, ಗ್ರಾಮೀಣ ಭಾಗದ ಹಾಗೂ ಪುರಾತನ ಕ್ರೀಡೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​​ ತಿಳಿಸಿದ್ದಾರೆ.

ಆನೆಗೊಂದಿ ಉತ್ಸವ

By

Published : Nov 25, 2019, 11:29 AM IST

ಗಂಗಾವತಿ:ಜನವರಿ 8 ಮತ್ತು 9ರಂದು ಆಚರಿಸಲು ಉದ್ದೇಶಿಸಿರುವ ಆನೆಗೊಂದಿ ಉತ್ಸವದಲ್ಲಿ ರಾಜರ ಕಾಲದ, ಗ್ರಾಮೀಣ ಭಾಗದ ಹಾಗೂ ಪುರಾತನ ಕ್ರೀಡೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ ತಿಳಿಸಿದ್ದಾರೆ.

ಆನೆಗೊಂದಿ ಉತ್ಸವದಲ್ಲಿ ಪುರಾತನ ಕಾಲದ ಕ್ರೀಡೆಗಳಿಗೂ ಆದ್ಯತೆ

ಮಹಿಳೆಯರಿಗೆ ರಂಗೋಲಿ, ಪುರುಷರಿಗೆ ಕುಸ್ತಿ, ಪಗಡೆ, ಚದುರಂಗ, ಬೆಟ್ಟ ಹತ್ತುವ (ರಾಕ್ ಕ್ಲೈಂಬಿಂಗ್), ಚಾರಣ (ಟ್ರಕ್ಕಿಂಗ್), ಜಲ ಕ್ರೀಡೆ (ಬೋಟಿಂಗ್) ಸೇರಿದಂತೆ ಪುರುಷ ಮತ್ತು ಮಹಿಳೆಯರಿಗೆ ತಿನ್ನುವ ಸ್ಪರ್ಧೆ ಆಯೋಜಿಸುವ ಉದ್ದೇಶವಿದೆ. ಸ್ಥಳೀಯರು, ಸಂಘಟನೆಗಳ ಮುಖಂಡರು, ಸಾಹಿತಿಗಳು ಹಾಗೂ ಕ್ರಿಯಾಶೀಲ ಯುವಕರು ಸಲಹೆ ನೀಡಿದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಇದ್ದರು.

For All Latest Updates

ABOUT THE AUTHOR

...view details