ಕೊಪ್ಪಳ:ಹಳ್ಳ ದಾಟುತ್ತಿರುವಾಗ ಏಕಾಏಕಿ ನೀರು ಬಂದ ಪರಿಣಾಮ ಟ್ರಾಕ್ಟರ್ ಕೊಚ್ಚಿ ಹೋಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹಳ್ಳದಲ್ಲಿ ಕೊಚ್ಚಿಹೋದ ಟ್ರ್ಯಾಕ್ಟರ್... ಅಪಾಯದಿಂದ ಪಾರಾದ ಚಾಲಕ
ತೊಂಡಿಹಾಳ ಗ್ರಾಮದ ನಿಂಗನಗೌಡ ಹೊಸಳ್ಳಿ ಎಂಬ ರೈತನಿಗೆ ಸೇರಿದ ಟ್ರ್ಯಾಕ್ಟರ್ ಹೊಲದ ಕೆಲಸ ಮುಗಿಸಿಕೊಂಡು ಚಾಲಕ ವಾಪಸ್ ಗ್ರಾಮಕ್ಕೆ ಮರಳುವಾಗ ಹಳ್ಳ ದಾಟಿಸಲು ಮುಂದಾದ ವೇಳೆ ಏಕಾಏಕಿ ನೀರು ಬಂದಿದೆ.
ಗದಗ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ವ್ಯಾಪಕವಾಗಿ ಮಳೆಯಾಗಿದ್ದರಿಂದ ಆ ಭಾಗದಿಂದ ಬರುವ ತೊಂಡಿಹಾಳ ಗ್ರಾಮದ ಬಳಿ ಇರುವ ಹಳ್ಳಕ್ಕೆ ನೀರು ಹರಿದು ಬಂದಿದೆ. ತೊಂಡಿಹಾಳ ಗ್ರಾಮದ ನಿಂಗನಗೌಡ ಹೊಸಳ್ಳಿ ಎಂಬ ರೈತನಿಗೆ ಸೇರಿದ ಟ್ರ್ಯಾಕ್ಟರ್ ಹೊಲದ ಕೆಲಸ ಮುಗಿಸಿಕೊಂಡು ಚಾಲಕ ವಾಪಸ್ ಗ್ರಾಮಕ್ಕೆ ಮರಳುವಾಗ ಹಳ್ಳ ದಾಟಿಸಲು ಮುಂದಾಗಿದ್ದಾನೆ.
ಈ ಸಂದರ್ಭದಲ್ಲಿ ಹಳ್ಳದಲ್ಲಿ ನೀರು ಏಕಾಏಕಿ ಬಂದಿದ್ದರಿಂದ ಟ್ರಾಕ್ಟರ್ ಕೊಚ್ಚಿಹೋಗಿದೆ. ಆದರೆ ಚಾಲಕ ಅಪಾಯದಿಂದ ಪಾರಾಗಿ ದಡ ಸೇರಿದ್ದಾನೆ. ಟ್ರ್ಯಾಕ್ಟರ್ ನಲ್ಲಿದ್ದ ಹೆಸರು ಹಾಗೂ ಕೃಷಿ ಸಾಮಗ್ರಿಗಳು ನೀರುಪಾಲಾಗಿವೆ. ಇನ್ನು ಬಂಡಿಹಾಳ ಗ್ರಾಮದಲ್ಲಿ ಹಳ್ಳ ಬಂದಿದ್ದರಿಂದ ದಾಟಲು ಆಗದೆ ಸಿಲುಕಿಕೊಂಡಿದ್ದ 8 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಜಮೀನು ಕೆಲಸಕ್ಕಾಗಿ ಬಂಡಿಹಾಳ ಗ್ರಾಮದ ಜನರು ಗ್ರಾಮದ ಬಳಿ ಇರುವ ಹಳ್ಳ ದಾಟಿಕೊಂಡು ಹೋಗಿದ್ದರು. ಸಂಜೆ ಹಳ್ಳ ತುಂಬಿ ಹರಿದ ಪರಿಣಾಮ ದಾಟಲು ಆಗದೆ ಸಿಲುಕಿಕೊಂಡಿದ್ದರು. ವಿಷಯ ತಿಳಿದ ಯಲಬುರ್ಗಾ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ಅವರನ್ನು ರಕ್ಷಣೆ ಮಾಡಿದ್ದಾರೆ.