ಕರ್ನಾಟಕ

karnataka

ETV Bharat / state

ಗಂಗಾವತಿ : ಕೇಂದ್ರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ಟ್ರ್ಯಾಕ್ಟರ್‌ಗಳಿಂದ ಬೃಹತ್‌ ರ‍್ಯಾಲಿ.. - Gangwadi in protest of agrarian policy

ಸಿದ್ದಾಪುರ, ಕಾರಟಗಿ, ನವಲಿ ಮೂಲಕ ಸಾಗುವ ಟ್ರ್ಯಾಕ್ಟರ್ ರ‍್ಯಾಲಿ, ಕಾಟಾಪುರದ ಮೂಲಕ ಸಂಜೆ ಕನಕಗಿರಿ ತಲುಪಲಿದೆ. ಪ್ರತಿ ಗ್ರಾಮದಿಂದಲೂ ಕನಿಷ್ಟ 50ರಂತೆ ಟ್ರ್ಯಾಕ್ಟರ್ ಆಗಮಿಸಲಿವೆ. ಕನಗಿರಿ ತಲುಪುವ ಹೊತ್ತಿಗೆ ಒಂದು ಸಾವಿರ ಟ್ರ್ಯಾಕ್ಟರ್ ಆಗಮಿಸಲಿವೆ..

ಟ್ರಾಕ್ಟರ್ ರ‍್ಯಾಲಿ
ಟ್ರಾಕ್ಟರ್ ರ‍್ಯಾಲಿ

By

Published : Feb 15, 2021, 3:15 PM IST

ಗಂಗಾವತಿ :ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳನ್ನ ವಿರೋಧಿಸಿ ಕಾಂಗ್ರೆಸ್ ಪಕ್ಷ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ‍್ಯಾಲಿಗೆ ತಾಲೂಕಿನ ಶ್ರೀರಾಮನಗರದಲ್ಲಿ ಚಾಲನೆ ನೀಡಿಲಾಯಿತು.

ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಿ ಅವರ ನೇತೃತ್ವದಲ್ಲಿ ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಗ್ರಾಮದಿಂದ 110 ಟ್ರ್ಯಾಕ್ಟರ್​ಗಳು ಹಾಗೂ ಚಾಲಕರು ಪಾಲ್ಗೊಂಡಿದ್ದರು.

ಕಾಂಗ್ರೆಸ್​ ವತಿಯಿಂದ ಟ್ರ್ಯಾಕ್ಟರ್ ರ‍್ಯಾಲಿ..

ಇದೇ ವೇಳೆ ಮಾತನಾಡಿದ ಅವರು, ಸಿದ್ದಾಪುರ, ಕಾರಟಗಿ, ನವಲಿ ಮೂಲಕ ಸಾಗುವ ಟ್ರ್ಯಾಕ್ಟರ್ ರ‍್ಯಾಲಿ, ಕಾಟಾಪುರದ ಮೂಲಕ ಸಂಜೆ ಕನಕಗಿರಿ ತಲುಪಲಿದೆ. ಪ್ರತಿ ಗ್ರಾಮದಿಂದಲೂ ಕನಿಷ್ಟ 50ರಂತೆ ಟ್ರ್ಯಾಕ್ಟರ್ ಆಗಮಿಸಲಿವೆ. ಕನಗಿರಿ ತಲುಪುವ ಹೊತ್ತಿಗೆ ಒಂದು ಸಾವಿರ ಟ್ರ್ಯಾಕ್ಟರ್ ಆಗಮಿಸಲಿವೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ABOUT THE AUTHOR

...view details