ಕೊಪ್ಪಳ : ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರ್ಯಾಕ್ಟರ್ ಮುಗಿಚಿ ಬಿದ್ದ ಕಾರಣ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಬಳಿ ನಡೆದಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು - ಟ್ರಾಕ್ಟರ್ ಅಪಘಾತ ಸುದ್ದಿ
ಕುಷ್ಟಗಿ ತಾಲೂಕಿನ ಮಾಲಗಿತ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಟ್ರಾಕ್ಟರ್ ಇಂಜಿನ್ ಪಲ್ಟಿ
ಟ್ರಾಕ್ಟರ್ ಇಂಜಿನ್ ಪಲ್ಟಿ ಸವಾರ ಸ್ಥಳದಲ್ಲೇ ಸಾವು
ಮೃತ ಚಾಲಕನನ್ನು ಗದಗ ಜಿಲ್ಲೆ ರೋಣ ತಾಲೂಕಿನ ಗುಳಗಳಿ ಗ್ರಾಮದ ದೇವೇಂದ್ರಪ್ಪ ಸಿಗ್ಲಿ (35) ಎಂದು ಗುರುತಿಸಲಾಗಿದೆ. ಗುಳಗಳಿ ಗ್ರಾಮದಲ್ಲಿ ಮರಳು ತುಂಬಿಕೊಂಡು ಜಿಲ್ಲೆಯ ಮಾಲಗಿತ್ತಿ ಕಡೆ ಬರುವಾಗ ಮುಖ್ಯ ರಸ್ತೆ ಬಂದ್ ಆಗಿದ್ದ ಪರಿಣಾಮ ಕಚ್ಚಾ ರಸ್ತೆಯ ಮೂಲಕ ಸಾಗುವಾಗ ಟ್ರಾಕ್ಟರ್ ಇಂಜಿನ್ ಮೇಲೆದ್ದು ಈ ಘಟನೆ ಸಂಭವಿಸಿದೆ.
ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.