ಕರ್ನಾಟಕ

karnataka

ETV Bharat / state

ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರು ಹೊರಕ್ಕೆ: ಸಂಪರ್ಕ ಕಳ್ಕೊಂಡ ವಿರುಪಾಪುರಗಡ್ಡೆ

ಪ್ರವಾಸೋದ್ಯಮ ಕೇಂದ್ರ ಹಾಗೂ ವಿದೇಶಿಗರ ಮೋಜು-ಮಸ್ತಿಯ ತಾಣ ಎಂದು ಗುರುತಿಸಿಕೊಂಡಿರುವ ಗಂಗಾವತಿಯ ವಿರುಪಾಪುರ ಗಡ್ಡೆಯ ಬಾಹ್ಯ ಸಂಪರ್ಕ ಕಳೆದುಕೊಂಡಿದೆ.

By

Published : Sep 8, 2019, 1:42 PM IST

ವಿರುಪಾಪುರಗಡ್ಡೆ

ಗಂಗಾವತಿ:ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮ ವಿರುಪಾಪುರಗಡ್ಡೆಯ ಸುತ್ತಲ ಪ್ರದೇಶ ಜಲಾವೃತವಾಗಿದ್ದು ವಿರುಪಾಪುರ ಗಡ್ಡೆ ಜಲಾವೃತವಾಗಿದ್ದು ಬಾಹ್ಯ ಸಂಪರ್ಕ ಕಳೆದುಕೊಂಡಿದೆ.

ವಿರುಪಾಪುರಗಡ್ಡೆಯ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿರುವ ಪರಿಣಾಮ, ವಾಹನ ಸಂಚಾರ ಸೇರಿದಂತೆ ಇಲ್ಲಿನ ಎಲ್ಲಾ ರಸ್ತೆ ಮಾರ್ಗಗಳು ಸ್ಥಗಿತವಾಗಿವೆ. ಕೇವಲ ಗಡ್ಡೆ ಮಾತ್ರವಲ್ಲ, ನದಿಪಾತ್ರದಲ್ಲಿನ ಹೊಲ-ತೋಟಗಳಿಗೂ ನೀರು ನುಗ್ಗಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಪ್ರವಹಿಸುತ್ತಿದೆ.

ಸಂಪರ್ಕ ಕಳೆದುಕೊಂಡ ವಿದೇಶಿಗರ ತಾಣ ವಿರುಪಾಪುರಗಡ್ಡೆ

ಕಳೆದ ಮೂರು ವಾರದ ಹಿಂದೆ ವಿರುಪಾಪುರ ಗಡ್ಡೆಯಲ್ಲಿ ಇದೇ ರೀತಿಯ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬಂದಿದ್ದ ಎನ್​ಡಿಆರ್​ಎಫ್ ತಂಡದ ಐವರು ಯೋಧರುಳ್ಳ ಬೋಟ್ ನೀರಲ್ಲಿ ಮಗುಚಿಬಿದ್ದ ಪ್ರಕರಣ ನಡೆದಿತ್ತು.

ABOUT THE AUTHOR

...view details