ಕರ್ನಾಟಕ

karnataka

ETV Bharat / state

ವಿವಾದಾತ್ಮಕ ನವವೃಂದಾವನ ಗಡ್ಡೆಯಲ್ಲೇ ನಾಳೆ ನಡೆಯಲಿದೆ ಪದ್ಮನಾಭ ತೀರ್ಥರ ಆರಾಧನೆ - Anegundi Padmanabha Tirtha pooje

ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದದ ಮಧ್ಯೆಯೇ ನಾಳೆಯಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.

ನಾಳೆ ಪದ್ಮನಾಭ ತೀರ್ಥರ ಆರಾಧನೆ

By

Published : Nov 23, 2019, 4:49 PM IST

ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದದ ನಡುವೆ ನಾಳೆಯಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.

ನಾಳೆ ಪದ್ಮನಾಭ ತೀರ್ಥರ ಆರಾಧನೆ

ಪದ್ಮನಾಭ ತೀರ್ಥರ ಪೂರ್ವಾರಾಧನೆ ಭಾನುವಾರ ಮತ್ತು ಮಧ್ಯಾರಾಧನೆಯನ್ನು ಸೋಮವಾರ ಮಧ್ಯಾಹ್ನದವರೆಗೆ ಉತ್ತರಾಧಿ ಮಠದಿಂದಲೇ ಆರಂಭಿಸಬೇಕು ಎಂದು ಕೋರ್ಟ್​ ಸ್ಪಷ್ಟ ನಿರ್ದೆಶನ ನೀಡಿದೆ. ಸೋಮವಾರ ಮಧ್ಯಾಹ್ನದ ಬಳಿಕ ಮಧ್ಯಾರಾಧನೆ ಮತ್ತು ಮಂಗಳವಾರ ಉತ್ತರಾಧನೆಯನ್ನು ರಾಯರಮಠ ನೆರವೇರಿಸಲಿದೆ. ಕಳೆದ ವರ್ಷ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲಿಗೆ ರಾಯರ ಮಠ ಬಳಿಕ ಉತ್ತರಾಧಿ ಮಠದಿಂದ ನೆರವೇರಿಸಲಾಗಿತ್ತು.

ABOUT THE AUTHOR

...view details