ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆಗೆ ನಗರದಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಭಾರಿ ಪೈಪೋಟಿಯಿಂದ ಈ ಚುನಾವಣೆ ನಡೆಯುತ್ತಿದೆ.
ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಡಿಮೆ ಇಲ್ಲ ಈ ಚುನಾವಣೆ...! - undefined
ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆಗೆ ಕೊಪ್ಪಳದಲ್ಲಿ ಇಂದು ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಡಿಮೆ ಇಲ್ಲವೆಂಬಂತೆ ಭಾರಿ ಪೈಪೋಟಿಯಿಂದ ಈ ಚುನಾವಣೆ ನಡೆಯುತ್ತಿದೆ.
ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಕಟ್ಟಡದಲ್ಲಿ ಒಟ್ಟು 8 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 45 ಇಲಾಖೆಗಳಿಂದ 62 ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 35 ಇಲಾಖೆಗಳಿಂದ 44 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇನ್ನುಳಿದ 10 ಇಲಾಖೆಗಳಿಂದ 15 ಜನ ನಿರ್ದೇಶಕರ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದೆ.
18 ನಿರ್ದೇಶಕರ ಸ್ಥಾನಕ್ಕೆ ಒಟ್ಟು 40 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಾಥಮಿಕ ಶಾಲೆಯ 1,275, ಪ್ರೌಢಶಾಲೆಯ 408, ಕೃಷಿ ಇಲಾಖೆಯ 39, ಪಶು ಸಂಗೋಪನಾ ಇಲಾಖೆಯ 25, ಸಹಕಾರ ಇಲಾಖೆಯ 28, ಪಿಡಬ್ಲ್ಯುಡಿಯ 100, ಅರಣ್ಯ ಇಲಾಖೆಯ 5, ತಾಂತ್ರಿಕ ಶಿಕ್ಷಣ ಇಲಾಖೆಯ 31, ರಾಜ್ಯ ಲೆಕ್ಕಪತ್ರ ಇಲಾಖೆಯ 50 ಹಾಗೂ ಧಾರ್ಮಿಕ ದತ್ತಿ, ಕಾನೂನು ಮಾಪನ, ಜಿಲ್ಲಾ ತರಬೇತಿ ಸಂಸ್ಥೆಯ 6 ಮತದಾರರು ಸೇರಿದಂತೆ ಒಟ್ಟು 1970 ಮತದಾರರು ಇಂದು 18 ನಿರ್ದೇಶಕರ ಆಯ್ಕೆಗೆ ಮತ ಚಲಾಯಿಸುತ್ತಿದ್ದಾರೆ.