ಕರ್ನಾಟಕ

karnataka

ETV Bharat / state

ಗಂಗಾವತಿ: ಇಂದು ಒಂದೇ ದಿನ 15 ಸೋಂಕಿತ ಪ್ರಕರಣ ಪತ್ತೆ - ಕೊಪ್ಪಳ ಕೊರೊನಾ ಪ್ರಕರಣಗಳು

ಗಂಗಾವತಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಒಂದೇ ದಿನ 15 ಕೇಸ್‌ಗಳು ಪತ್ತೆಯಾಗಿದೆ.

Gangavathi
Gangavathi

By

Published : Jul 5, 2020, 11:11 AM IST

ಗಂಗಾವತಿ: ಭತ್ತದ ಕಣಜ ಗಂಗಾವತಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಒಂದೇ ದಿನ 15 ಕೇಸ್‌ಗಳು ಪತ್ತೆಯಾಗಿದೆ.

ತಾಲೂಕಿನ ಶ್ರೀರಾಮನಗರದಲ್ಲಿ ಮೂರು, ಆಗೋಲಿ, ಹೊಸಳ್ಳಿ, ಜೀರಾಳ ಕಲ್ಗುಡಿ, ತಲಾ ಒಂದು, ಮರ್ಲಾನಹಳ್ಳಿಯಲ್ಲಿ ಮೂರು ಹೊಸ ಕೇಸುಗಳು ಪತ್ತೆಯಾಗಿವೆ. ಕೇವಲ ಗಂಗಾವತಿ ನಗರದಲ್ಲಿ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಗಂಗಾವತಿ ನಗರದ ವಾಲ್ಮೀಕಿ ವೃತ್ತ, ಪಾಂಡುರಂಗ ದೇವಸ್ಥಾನದ ಸಮೀಪ, ಅಗ್ನಿ ಶಾಮಕದಳ, ಕಿಲ್ಲಾ ಏರಿಯಾ ಸೇರಿದಂತೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ABOUT THE AUTHOR

...view details