ಕರ್ನಾಟಕ

karnataka

ETV Bharat / state

ಕೊಪ್ಪಳ: ತಂಬಾಕು ಉತ್ಪನ್ನಗಳನ್ನು ನಾಶಪಡಿಸಿದ ಅಧಿಕಾರಿಗಳು

ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದ ನಗರಸಭೆ ಅಧಿಕಾರಿಗಳು ಅವುಗಳನ್ನು ನಾಶಪಡಿಸಿದರು.

tobacco
tobacco

By

Published : Apr 30, 2020, 10:21 AM IST

Updated : Apr 30, 2020, 11:22 AM IST

ಕೊಪ್ಪಳ: ವಶಕ್ಕೆ ಪಡೆದಿದ್ದ ಅಪಾರ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಕೊಪ್ಪಳ ನಗರಸಭೆ ಸಿಬ್ಬಂದಿ ನಾಶಪಡಿಸಿದ್ದಾರೆ.

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನಗಳ‌ ಮಾರಾಟಕ್ಕೆ ನಿಷೇಧವಿದೆ. ಆದರೂ ಆದೇಶ‌ ಮೀರಿ ಕೆಲ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ತಂಬಾಕು ಉತ್ಪನ್ನಗಳ ಮಾರಾಟ ನಡೆಯುತ್ತಿತ್ತು.

ತಂಬಾಕು ಉತ್ಪನ್ನಗಳನ್ನು ನಾಶಪಡಿಸಿದ ಅಧಿಕಾರಿಗಳು

ಈ ಬಗ್ಗೆ ಮಾಹಿತಿ ಪಡೆದ ನಗರಸಭೆ ಆಯುಕ್ತ ಮಂಜುನಾಥ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ‌ ನಡೆಸಿ ಅಪಾರ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡದುಕೊಂಡಿದ್ದರು.

Last Updated : Apr 30, 2020, 11:22 AM IST

ABOUT THE AUTHOR

...view details