ಕರ್ನಾಟಕ

karnataka

ETV Bharat / state

ಎತ್ತಿನ ಗಾಡಿಗೆ ಟಿಪ್ಪರ್ ಲಾರಿ​ ಡಿಕ್ಕಿ.. ಓರ್ವ ಮಹಿಳೆ ಹಾಗೂ ಎತ್ತುಗಳಿಗೆ ಗಾಯ - ಎತ್ತಿನ ಗಾಡಿಗೆ ಟಿಪ್ಪರ್​ ಡಿಕ್ಕಿ

ಟಿಪ್ಪರ್​ ಲಾರಿಯೊಂದು ಎತ್ತಿನಗಾಡಿಗೆ ಡಿಕ್ಕಿಹೊಡೆದ ಪರಿಣಾಮ ಎತ್ತುಗಳು ಹಾಗೂ ಗಾಡಿಯಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಎತ್ತಿನ ಗಾಡಿಗೆ ಟಿಪ್ಪರ್ ಲಾರಿ​ ಡಿಕ್ಕಿ

By

Published : Oct 14, 2019, 6:27 PM IST

ಕೊಪ್ಪಳ:ಎತ್ತಿನ ಗಾಡಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಹಾಗೂ ಗಾಡಿಯಲ್ಲಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಎತ್ತಿನ ಗಾಡಿಗೆ ಟಿಪ್ಪರ್ ಲಾರಿ​ ಡಿಕ್ಕಿ

ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಬಾಲೆಸಾಬ್ ಮುಲ್ಲಾರ್ ಅವರು ಎತ್ತಿನ ಬಂಡಿಯಲ್ಲಿ ತಮ್ಮ ಪತ್ನಿಯೊಂದಿಗೆ ಹೊಲಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಒಂದು ಎತ್ತಿನ ಕೊಂಬು ಹಾಗೂ ಕಾಲು ಮುರಿದಿದೆ. ಇನ್ನೊಂದು ಎತ್ತಿಗೂ ಗಾಯವಾಗಿದ್ದು ಬಂಡಿಯಲ್ಲಿದ್ದ ಬಾಲೆಸಾಬ್ ಅವರ ಪತ್ನಿ ಕೂಡ ಗಾಯಗೊಂಡಿದ್ದಾರೆ.

ABOUT THE AUTHOR

...view details