ಕರ್ನಾಟಕ

karnataka

ETV Bharat / state

ಡಂಪಿಂಗ್ ಯಾರ್ಡ್​ನಲ್ಲಿ ಟಿಪ್ಪರ್​ಗೆ ವಿದ್ಯುತ್ ಸ್ಪರ್ಶ: ಚಾಲಕ ದುರ್ಮರಣ - ಗ್ರಾನೈಟ್ ತ್ಯಾಜ್ಯ ಡಂಪಿಂಗ್ ಯಾರ್ಡ್​ನಲ್ಲಿ ವಿದ್ಯುತ್​ ಶಾಕ್​

ಗ್ರಾನೈಟ್ ತ್ಯಾಜ್ಯ ಡಂಪಿಂಗ್ ಯಾರ್ಡ್​ನಲ್ಲಿ ಟಿಪ್ಪರ್​ಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ 25 ವರ್ಷ ವಯಸ್ಸಿನ ಚಾಲಕ ಸಾವನ್ನಪ್ಪಿರುವ ಘಟನೆ ಕುಷ್ಟಗಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

tipper driver died due to electric shock during wastage dumping
ವಿದ್ಯುತ್ ಸ್ಪರ್ಶ ಟಿಪ್ಪರ ಚಾಲಕ ಬಲಿ

By

Published : Dec 4, 2020, 7:31 AM IST

ಕುಷ್ಟಗಿ (ಕೊಪ್ಪಳ): ಗ್ರಾನೈಟ್ ತ್ಯಾಜ್ಯ ಡಂಪಿಂಗ್ ಯಾರ್ಡ್​ನಲ್ಲಿ ಟಿಪ್ಪರ್​ಗೆ ವಿದ್ಯುತ್ ತಂತಿ ಸ್ಪರ್ಶಕ್ಕೆ ಯುವಕ ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಬಂಡರ್ಗಲ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಹೂಲಗೇರಾ ಗ್ರಾಮದ ನಿವಾಸಿ ಮುತ್ತಣ್ಣ ತೋಪಲಕಟ್ಟಿ (25) ಮೃತ ಟಿಪ್ಪರ್ ಚಾಲಕ. ಎಂದಿನಂತೆ ಟಿಪ್ಪರ್​ನಲ್ಲಿ ಕಲ್ಲು ಕ್ವಾರಿಯಲ್ಲಿನ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ದಿಬ್ಬದಲ್ಲಿ ಲಿಫ್ಟ್ ಮಾಡುತ್ತಿದ್ದ. ಈ ವೇಳೆ ಟಿಪ್ಪರ್ ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಿಪ್ಪರ್ ಸಹ ಭಾಗಶಃ ಸುಟ್ಟಿದೆ.

ಇತ್ತೀಚೆಗೆ ಪತಿ ಕಳೆದುಕೊಂಡ ದುಂಃಖದಲ್ಲಿದ್ದ ಮೃತ ಮುತ್ತಣ್ಣನ ತಾಯಿಗೆ ಇದ್ದೊಬ್ಬ ಮಗನ ದುರಂತ ಸಾವು ಶೋಕ ಸಾಗರದಲ್ಲಿ ಮುಳುಗಿಸಿದೆ. ಹನುಮಸಾಗರ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details