ಗಂಗಾವತಿ: ವಿಕಲಚೇತನರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗುವ 4.95 ಲಕ್ಷ ಮೊತ್ತದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಗರಸಭೆಯ ಆವರಣದಲ್ಲಿ ನಡೆಯಿತು.
ಗಂಗಾವತಿಯಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಲು ಫಲಾನುಭವಿಗಳ ಆಯ್ಕೆ - Selection of beneficiaries in Gangawati Municipality
ನಗರಸಭೆಯ ವಿಕಲಚೇತನರ ಕಲ್ಯಾಣ ನಿಧಿಯಲ್ಲಿ ತ್ರಿಚಕ್ರ ವಾಹನ ವಿತರಿಸಲು ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಗಂಗಾವತಿ ನಗರಸಭೆಯ ಆವರಣದಲ್ಲಿ ನಡೆಯಿತು.
ತ್ರಿಚಕ್ರ ವಾಹನ ವಿತರಿಸಲು ಫಲಾನುಭವಿಗಳ ಆಯ್ಕೆ
ಒಟ್ಟು ಆರು ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸುವ ಗುರಿ ಹೊಂದಲಾಗಿದ್ದು, ಈ ಬಗ್ಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 89 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಸೂಕ್ತ ದಾಖಲೆ ಇಲ್ಲದ ಅರ್ಜಿಗಳನ್ನು ವಜಾಗೊಳಿಸಿ ಕ್ರಮಬದ್ಧವಾಗಿದ್ದ 63 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಸ್ವೀಕೃತ ಅರ್ಜಿಗಳನ್ನು ಹಾಜರಿದ್ದ ಅರ್ಜಿದಾರರ ಸಮ್ಮುಖದಲ್ಲಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಲಾಟರಿ ಮೂಲಕ ಆರು ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಹಾಗೂ ಮೀಸಲು ಉದ್ದೇಶಕ್ಕೆ ಹೆಚ್ಚುವರಿ ಮೂರು ಜನರನ್ನು ಕಾಯ್ದಿರಿಸಲಾಯಿತು.