ಕುಷ್ಟಗಿ/ಕೊಪ್ಪಳ:ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ 3 ಬಣವೆಗಳು ಬೆಂಕಿಗೆ ಆಹುತಿಯಾಗಿದ್ದು, 1 ಲಕ್ಷ ರೂ. ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ.
ಕುಷ್ಟಗಿ: ಅಗ್ನಿ ಆಕಸ್ಮಿಕಕ್ಕೆ 3 ಬಣವೆಗಳು ಬೆಂಕಿಗೆ ಆಹುತಿ - ಕೊಪ್ಪಳ
ಅಗ್ನಿ ಆಕಸ್ಮಿಕಕ್ಕೆ ಹೊಳೆಯಪ್ಪ ಸಿದ್ದಾಪೂರ ಅವರಿಗೆ ಸೇರಿದ ಜೋಳದ ಸೊಪ್ಪೆ, ಭತ್ತದ ಹುಲ್ಲು, ಕಡಲೆ, ತೊಗರೆ ಹೊಟ್ಟಿನ ಬಣವೆಗಳು ಸುಟ್ಟು ಕರಕಲಾಗಿವೆ.
ಅಗ್ನಿ ಆಕಸ್ಮಿಕಕ್ಕೆ 3 ಬಣವೆಗಳು ಬೆಂಕಿಗೆ ಆಹುತಿ
ಗ್ರಾಮದ ಹೊರವಲಯದ ಹೊಳೆಯಪ್ಪ ಸಿದ್ದಾಪೂರ ಅವರಿಗೆ ಸೇರಿದ ಜೋಳದ ಸೊಪ್ಪೆ, ಭತ್ತದ ಹುಲ್ಲು, ಕಡಲೆ, ತೊಗರೆ ಹೊಟ್ಟಿನ ಬಣವೆಗಳು ಸುಟ್ಟು ಕರಕಲಾಗಿವೆ. ಇತ್ತೀಚೆಗೆಷ್ಟೇ 60 ಸಾವಿರ ರೂ ನೀಡಿ ಭತ್ತದ ಹುಲ್ಲು ಖರೀದಿಸಲಾಗಿತ್ತು. ಸದರಿ ಬಣವೆಗಳಿಗೆ ಬೆಂಕಿ ಆವರಿಸುತ್ತಿದ್ದಂತೆ ಅಗ್ನಿಶಾಮಕ ಠಾಣೆಯವರು ಆಗಮಿಸಿ ನಂದಿಸಿದರು.
ವರ್ಷವಿಡಿ ಜಾನುವಾರುಗಳ ಆಹಾರಕ್ಕಾಗಿ ಸಂಗ್ರಹಿಸಿಟ್ಟಿದ್ದ ಮೇವು ಬೆಂಕಿಗೆ ಆಹುತಿಯಾಗಿರುವುದು ರೈತನನ್ನು ಸಂಕಷ್ಟಕ್ಕೆ ದೂಡಿದೆ.