ಕುಷ್ಟಗಿ/ಕೊಪ್ಪಳ: ಕುಷ್ಟಗಿಯಲ್ಲಿ ಇಂದು 6 ವರ್ಷದ ಮಗು ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಕುಷ್ಟಗಿ: 6 ವರ್ಷದ ಮಗು ಸೇರಿ ಮೂವರಿಗೆ ಕೊರೊನಾ - Kustagi covid cases
ಇಂದು ಕುಷ್ಟಗಿಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.
![ಕುಷ್ಟಗಿ: 6 ವರ್ಷದ ಮಗು ಸೇರಿ ಮೂವರಿಗೆ ಕೊರೊನಾ Kustagi](https://etvbharatimages.akamaized.net/etvbharat/prod-images/768-512-03:04:38:1595842478-kn-kst-01-27-corona-positive-kushtagi-kac10028-27072020145752-2707f-1595842072-419.jpg)
Kustagi
ಆರೋಗ್ಯ ಇಲಾಖೆ ನೀಡಿದ ಮಾಹಿತಿ ಅನ್ವಯ ಜುಲೈ 21ರಂದು ಕುಷ್ಟಗಿ 2ನೇ ವಾರ್ಡ್ ಬುತ್ತಿ ಬಸವೇಶ್ವರ ನಗರದ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿತ್ತು. ಇದೀಗ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಪತಿಗೆ ಸಹ ಕೊರೊನಾ ದೃಢವಾಗಿದೆ.
ಜುಲೈ 25ರಂದು 22ನೇ ವಾರ್ಡ್ ತೆಗ್ಗಿನ ಓಣಿಯ ನಿವಾಸಿಗೆ ಸೋಂಕು ತಗುಲಿತ್ತು. ಇದೀಗ 65 ವರ್ಷದ ಪತ್ನಿ ಹಾಗೂ ಅವರ 6 ವರ್ಷದ ಮೊಮ್ಮಗುವಿಗೆ ಕೋವಿಡ್ ತಗುಲಿದೆ. ಈ ಹಿನ್ನೆಲೆ 2 ಮತ್ತು 22ನೇ ವಾರ್ಡ್ನಲ್ಲಿ ಸೀಲ್ ಡೌನ್ ಮುಂದುವರೆಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಪಾಟೀಲ್ ಮಾಹಿತಿ ನೀಡಿದರು.