ಕರ್ನಾಟಕ

karnataka

ETV Bharat / state

ಗಂಗಾವತಿ: ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾಗೆ ಬಲಿ! - ಕೊರೊನಾಗೆ ಬಲಿ

ಒಂದೇ ಕುಟುಂಬದ ಮೂವರು ಸಹೋದರರು ಒಂದು ವಾರದ ಅಂತರದಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದ ಘಟನೆ ಗಂಗಾವತಿಯ ಪಂಪಾನಗರದಲ್ಲಿ ನಡೆದಿದೆ.

corona
corona

By

Published : Aug 18, 2020, 3:29 PM IST

ಗಂಗಾವತಿ(ಕೊಪ್ಪಳ):ಕೊರೊನಾ ಸೋಂಕಿನಿಂದ ಒಂದೇ ಕುಟುಂಬದ ಮೂವರು ಸಹೋದರರು ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಪಂಪಾನಗರ ಪಾಂಡುರಂಗ ದೇವಸ್ಥಾನ ಸಮೀಪ ಸಂಭವಿಸಿದೆ.

ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಕೊಪ್ಪಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಗುಣಮುಖರಾಗಿ ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ ಆರು ದಿನಗಳ ಹಿಂದೆ ಅವರು ಮೃತಪಟ್ಟಿದ್ದರು.

ಅದಾದ ಬಳಿಕ ಅವರ ಇಬ್ಬರು ಸಹೋದರರಿಗೂ ಕೊರೊನಾ ದೃಢಪಟ್ಟಿತ್ತು. ಈ ಪೈಕಿ ಓರ್ವ ಸಹೋದರ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಇನ್ನೊಬ್ಬ ಸಹೋದರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಿನ್ನೆ ರಾತ್ರಿ ಚೇತರಿಸಿಕೊಂಡು ಗುಣಮುಖರಾಗಿದ್ದರು. ಆದರೆ ಇಂದು ದಿಢೀರ್ ಮೃತಪಟ್ಟಿದ್ದಾರೆ.

ABOUT THE AUTHOR

...view details