ಕೊಪ್ಪಳ :ಭಾನಾಪುರ ಬಳಿ ಸ್ಥಾಪನೆಯಾಗುತ್ತಿರುವ ಆಟಿಕೆ ವಸ್ತು ತಯಾರಿಕಾ ಘಟಕದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುವ ಭರವಸೆ ಇದೆ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆದರೆ, ಸ್ಥಳೀಯರಿಗೆ ನಿರೀಕ್ಷೆಯಷ್ಟು ಉದ್ಯೋಗಾವಕಾಶ ದೊರಕಿಲ್ಲ.
ಈ ನೋವು ನಮಗೂ ಇದೆ. ಇದೀಗ ಭಾನಾಪುರ ಬಳಿ ಸ್ಥಾಪನೆಯಾಗುತ್ತಿರುವ ಏಕಸ್ ಸಂಸ್ಥೆಯ ಆಟಿಕೆ ತಯಾರಿಕೆ ಘಟಕದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುವ ವಿಶ್ವಾಸವಿದೆ. ಈ ಸಂಸ್ಥೆಯ ಚೇರ್ಮನ್ ನಮ್ಮ ಕರ್ನಾಟಕದವರೇ ಆಗಿದ್ದಾರೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆಲಪ್ಪ ಆಚಾರ್ ಸದ್ಯಕ್ಕೆ ಈ ಕಂಪನಿಯಲ್ಲಿ ಒಂದು ಸಾವಿರ ಉದ್ಯೋಗ ಸೃಷ್ಠಿಯಾಗುತ್ತವೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾದರೆ ಸಾಕು ಎಂದರು.