ಗಂಗಾವತಿ (ಕೊಪ್ಪಳ):ಯಾರಿಗೆ ಕೊರೊನಾ ಲಕ್ಷಣಗಳಿವೆಯೋ ಅವರು ಮಾತ್ರ ಪರೀಕ್ಷೆ ಮಾಡಿಸಿಕೊಂಡರೆ ಸಾಕು. ಜನರು ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಹೇಳಿದ್ದಾರೆ.
ಕೊರೊನಾ ಲಕ್ಷಣ ಇರುವವರು ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಿ: ಕೊಪ್ಪಳ ಡಿಸಿ - ನಾಳೆಯಿಂದ ಶಾಲೆಗಳು ಪುನಾರಂಭ
ಗಂಗಾವತಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗೆ ಹನ್ನೊಂದುವರೆಗೆ ಕೋವಿಡ್ ಪರೀಕ್ಷೆ ಮಾಡುವುದನ್ನು ಸ್ಥಗಿತಗೊಳಿಸುತ್ತಿದ್ದಾರೆ. ಇದರಿಂದ ಪರೀಕ್ಷೆಯಿಲ್ಲದೇ ಬರಿಗೈಯಲ್ಲಿ ವಾಪಾಸ್ಸಾಗಬೇಕಾದ ಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ನಾಳೆಯಿಂದ ಶಾಲೆಗಳು ಪುನಾರಂಭ ಆಗಲಿವೆ. ನಗರದ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೊನಾ ಪರೀಕ್ಷೆ ಮಾಡಿಸುವುದು ಬಾಕಿಯಿದೆ. ಆದರೆ, ಗಂಗಾವತಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗೆ ಹನ್ನೊಂದುವರೆಗೆ ಕೋವಿಡ್ ಪರೀಕ್ಷೆ ಮಾಡುವುದನ್ನು ಸ್ಥಗಿತಗೊಳಿಸುತ್ತಿದ್ದಾರೆ. 10 ಗಂಟೆಗೆ ಕೋವಿಡ್ ಪರೀಕ್ಷೆ ಆರಂಭಿಸಿ, ಹನ್ನೊಂದುವರೆಗೆ ಮುಗಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರೆ ಟಾರ್ಗೆಟ್ ರೀಚ್ ಆಗಿದೆ ಎಂದು ಸಬೂಬು ನೀಡುತ್ತಿದ್ದಾರೆ. ಇದರಿಂದ ಪರೀಕ್ಷೆಯಿಲ್ಲದೇ ಬರಿಗೈಯಲ್ಲಿ ವಾಪಸ್ಸಾಗಬೇಕಾದ ಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಕೊರೊನಾ ಪರೀಕ್ಷೆ ಕಡ್ಡಾಯವಲ್ಲ. ಯಾರಿಗೆ ಲಕ್ಷಣಗಳಿವೆಯೋ ಅವರು ಮಾತ್ರ ಪರೀಕ್ಷೆ ಮಾಡಿಸಿಕೊಂಡರೆ ಸಾಕು. ಜನರು ಅನಗತ್ಯಗೊಂದಲಕ್ಕೀಡಾಗುವುದು ಬೇಡ ಎಂದರು.
TAGGED:
ನಾಳೆಯಿಂದ ಶಾಲೆಗಳು ಪುನಾರಂಭ