ಕರ್ನಾಟಕ

karnataka

ETV Bharat / state

ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ: ಜಗದೀಶ್ ಶೆಟ್ಟರ್ ತಿರುಗೇಟು - election news

ನಾನು ಹುಬ್ಬಳ್ಳಿ ಜನರ ಹೃದಯದಲ್ಲಿದ್ದೇನೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ಜಗದೀಶ್​​ ಶೆಟ್ಟರ್​​ ಹೇಳಿದರು.

this-is-not-gujarat-to-defeat-me-jagdish-shettar
ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ: ಜಗದೀಶ್ ಶೆಟ್ಟರ್ ತಿರುಗೇಟು

By

Published : May 1, 2023, 4:56 PM IST

Updated : May 1, 2023, 6:08 PM IST

ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ: ಜಗದೀಶ್ ಶೆಟ್ಟರ್ ತಿರುಗೇಟು

ಕೊಪ್ಪಳ:"ನನ್ನನ್ನು ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ ಬಿಜೆಪಿಗರು ಇದನ್ನ ಅರ್ಥ ಮಾಡಿಕೊಳ್ಳಬೇಕು" ಎಂದು ಶೆಟ್ಟರ್ ಮತ್ತು ಸವದಿ 50 ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ ಎಂದು ಹೇಳಿದ್ದ ಅಮಿತ್ ಶಾ ಹೇಳಿಕೆಗೆ ಜಗದೀಶ ಶೆಟ್ಟರ್ ತೀರುಗೇಟು‌ ನೀಡಿದ್ದಾರೆ. ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಹುಬ್ಬಳ್ಳಿ ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ ಜನ ಏನೂ ಅಂತ ನನಗೆ ಗೊತ್ತಿದೆ. ನಾನೇನು ಎನ್ನುವುದು ನನ್ನ ಕ್ಷೇತ್ರದ ಜನತೆಗೆ ಗೊತ್ತಿದೆ. ಅತಿ ಹೆಚ್ಚು ಮತಗಳ ಅಂತರದಿಂದ ಖಂಡಿತವಾಗಿ ನಾನು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಲಿಂಗಾಯತರಿಗೆ ಅವಮಾನ:ಬಹುಸಂಖ್ಯಾತ ಲಿಂಗಾಯತರಿಗೆ ಬಿಜೆಪಿ ಅವಮಾನ ಮಾಡಿದೆ. ಲಿಂಗಾಯತ ನಾಯಕರಾದ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ ನಂತರ ನನ್ನನ್ನು ತಾವೇ ಬರೆದ ರಾಜೀನಾಮೆ ಪತ್ರಕ್ಕೆ ಸಹಿ ಮಾಡಲು ಹೇಳಿದರು. ಇದರ ಹಿಂದೆ ಲಿಂಗಾಯತರನ್ನ ತುಳಿಯುವ ಹುನ್ನಾರ ಅಡಗಿದೆ ಎಂದು ಹೇಳಿದರು. 15 ದಿನದ ಮುಂಚೆ ಬಂದು ಪಕ್ಷದಲ್ಲಿ ಉನ್ನತವಾದ ಜವಬ್ದಾರಿ ಕೊಡುತ್ತೇವೆ ಎಂದು ಗೌರವದಿಂದ ಸೌರ್ಹಾದತೆಯಿಂದ ಮಾತನಾಡಿದ್ದರೆ ಪಕ್ಷ ಬಿಡುವ ಪ್ರಶ್ನೆಯೇ ಇರುತ್ತಿರಲಿಲ್ಲ, ಅದನ್ನ ಮಾಡದೇ ಬಹಳ ಒರಟಾಗಿ ನಡೆದುಕೊಂಡರು ಎಂದು ಜಗದೀಶ ಶೆಟ್ಟರ್​​ ಹೇಳಿದರು.

ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ, ಚಿತ್ತಾಪುರದಲ್ಲಿ 40 ಕ್ರಿಮಿನಲ್ ಕೇಸ್​​ ಇರುವ ರೌಡಿ ಶೀಟರ್​​ಗೆ ಟಿಕೆಟ್ ನೀಡಿದ್ದಾರೆ‌. ಆದರೆ, ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್​​ಗೆ ಯಾಕೆ ಟಿಕೆಟ್ ನೀಡಲ್ಲ ಎಂದು ಕೇಳಿದರೆ ಬಿಜೆಪಿಗರಲ್ಲಿ ಉತ್ತರವಿಲ್ಲ. ನಾನು ಕ್ಲೀನ್ ಹ್ಯಾಂಡ್ ಇದ್ದರೂ ನನಗೆ ಅವಕಾಶ ಕೊಡಲಿಲ್ಲ. ಈಗ ನನ್ನ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಹೊಸತನವಿಲ್ಲ:ಇಂದುಬಿಜೆಪಿ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಗೆ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಬಗ್ಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಬಿಜೆಪಿಯವರು ಜನರಿಗೆ ಏನ ಕೊಡಬೇಕು ಅಂದುಕೊಂಡಿದ್ದಾರೋ ಅದನ್ನಾಗಲೇ ಕಾಂಗ್ರೆಸ್ ಪಕ್ಷವು ತನ್ನ ಐದು ಗ್ಯಾರೆಂಟಿಗಳಲ್ಲಿ ನೀಡಿದೆ. ಕಾಂಗ್ರೆಸ್ ಗ್ಯಾರಂಟಿ ಜನಮಾನಸದಲ್ಲಿ ನಾಟಿದೆ. ಕಾಂಗ್ರೆಸ್​​ಗಿಂತ ಹೊಸ ಯೋಜನೆ ಬಿಜೆಪಿಯಲಿಲ್ಲ ಎಂದರು.

ಸವದಿ ಸೋಲಿಸಲು ಅಥಣಿ ಜನ ತಯಾರಾಗಿದ್ದಾರೆ - ರಮೇಶ್ ಜಾರಕಿಹೊಳಿ:​​ ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ, ದುಡ್ಡು ಅವಂದಲ್ಲ, ಅದು ನಮ್ಮದು. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ. ಕಡೆ ಘಳಿಗೆಯಲ್ಲಿ ಸವದಿಗೆ ಸ್ವಾಭಿಮಾನ ಕಾಡ್ತಿದೆಯಂತೆ. ಎರಡು ವರ್ಷ ಆತ ಆರಾಮಾಗಿದ್ದ. ಚುನಾವಣೆ ಘೋಷಣೆಯಾದ ಬಳಿಕ ಇದೀಗ ಸ್ವಾಭಿಮಾನ ಕಾಡ್ತಿದೆ ಎಂದು ಏಕವಚನದಲ್ಲಿ ರಮೇಶ್​​ ಜಾರಕಿಹೊಳಿ ಬೆಳಗಾವಿಯ ಕಾಗವಾಡದಲ್ಲಿ ಹೇಳಿದರು.

ಇದನ್ನೂ ಓದಿ:ಶರತ್ ಪತ್ನಿ ಕಣ್ಣೀರು ಹಾಕಿದ್ದನ್ನು ಅನುಕರಿಸಿ ಎಂಟಿಬಿ ನಾಗರಾಜ್ ವ್ಯಂಗ್ಯ: ತಿರುಗೇಟು ಕೊಟ್ಟ ಶರತ್ ಬಚ್ಚೇಗೌಡ

Last Updated : May 1, 2023, 6:08 PM IST

ABOUT THE AUTHOR

...view details