ಗಂಗಾವತಿ:ಕೊರೊನಾದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಂಗಳಮುಖಿಯರು ನಗರದಲ್ಲಿ ಅರಿವು ಮೂಡಿಸಿದ್ದಾರೆ.
ಪೊಲೀಸರೊಂದಿಗೆ ಬೀದಿಗಿಳಿದ ಮಂಗಳಮುಖಿಯರು...ಕೊರೊನಾ ಕುರಿತು ಜನಜಾಗೃತಿ - ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಂಗಳಮುಖಿಯರು ನಗರದಲ್ಲಿ ಅರಿವು
ಗಂಗಾವತಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸೇರಿದ ಸುಮಾರು ಐದಕ್ಕೂ ಹೆಚ್ಚು ಮಂಗಳಮುಖಿಯರು ಪೊಲೀಸರೊಂದಿಗೆ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡು ಕೊರೊನಾದಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿದ ವಿಶೇಷ ದೃಶ್ಯ ಕಂಡುಬಂತು.
ಪೊಲೀಸರೊಂದಿಗೆ ನಗರಕ್ಕೆ ಇಳಿದ ಮಂಗಳಮುಖಿಯರು.
ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸೇರಿದ ಸುಮಾರು ಐದಕ್ಕೂ ಹೆಚ್ಚು ಮಂಗಳಮುಖಿಯರು ಪೊಲೀಸರೊಂದಿಗೆ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡು ಕೊರೊನಾದಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿದರು.
ಯಮುನಮ್ಮ ಎಂಬುವವರ ನೇತೃತ್ವದಲ್ಲಿ ಜಾಗೃತಿಯಲ್ಲಿ ಪಾಲ್ಗೊಂಡಿದ್ದ ಅವರು, ಇದಕ್ಕೂ ಮುನ್ನ ಗಾಂಧಿ ವೃತ್ತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೈ ಹಿಡಿಯದೇ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.