ಕೊಪ್ಪಳ: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮಾತನಾಡುವ ಮುನ್ನ ಯೋಚಿಸಬೇಕು ಎಂದು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದ್ದಾರೆ.
'ನಮ್ಮದು ಹಿಟ್ಲರ್ ರಾಜಕೀಯವಲ್ಲ.. ಕೊರೊನಾ ಮನುಷ್ಯರಿಂದ ಮನುಷ್ಯರಿಗೆ ಬಂದಿದೆ ಅಷ್ಟೇ..' - Think before speak
ಕೊರೊನಾ ಹರಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಅಮರೇಗೌಡ, ನಮ್ಮದು ಹಿಟ್ಲರ್ ರಾಜಕೀಯವಲ್ಲ. ಇಂತಹ ಹೇಳಿಕೆಯಿಂದ ನಮಗೆ ಮತ ಹಾಕಿದ ಜನರಿಗೆ ಅಪಮಾನ ಮಾಡಿದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಹರಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಬಿಜೆಪಿಯವರು ಒಂದು ಸಮುದಾಯದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಒಂದು ವೇಳೆ ಆ ಸಮುದಾಯದಲ್ಲಿ ತಪ್ಪು ಮಾಡಿದ್ರೆ ಶಿಕ್ಷೆ ನೀಡಲಿ ಎಂದರು.
ಕೆಲವು ಕಡೆ ದೆಹಲಿ ಪ್ರಾರ್ಥನೆಗೆ ಹೋಗದೆ ಇರುವವರಿಗೂ ಕೊರೊನಾ ಸೋಂಕು ತಗುಲಿದೆ. ಅವರಿಂದ ಕೊರೊನಾ ಬಂದಿದೆ, ಇವರಿಂದ ಬಂದಿದೆ ಎನ್ನುವುದಕ್ಕಿಂತ ಮನುಷ್ಯರಿಂದ ಮನುಷ್ಯರಿಗೆ ಬಂದಿದೆ. ಅವರು ಸಹ ನಮ್ಮ ದೇಶದ ನಾಗರಿಕರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಅದಕ್ಕೆ ನಮ್ಮ ಸಹಮತವಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಅವರು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.