ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಡ್ರಾ ಮಾಡಿದ್ದ 2.56 ಲಕ್ಷ ರೂ. ರೈತರೊಬ್ಬರ ಸಾಲದ ಹಣವನ್ನು ಖದೀಮರು ಎಗರಿಸಿದ ಘಟನೆ ನಡೆದಿದೆ.
ಕುಷ್ಟಗಿ ಬ್ಯಾಂಕ್ನಲ್ಲಿ ಸಾಲಗಾರ ರೈತ ದೊಡ್ಡಬಸಯ್ಯ ಹಿರೇಮಠ ಅವರಿಗೆ 3.6 ಲಕ್ಷ ರೂ. ಮೊತ್ತದ ಸಾಲದ ಚೆಕ್ ನೀಡಲಾಗಿತ್ತು. ಸದರಿ ಮೊತ್ತವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ಡ್ರಾ ಮಾಡಿಸಿಕೊಡಲು ಬ್ಯಾಂಕ್ನ ಸಿಬ್ಬಂದಿ ಗೌಸುಸಾಬ್ ಮುಲ್ಲಾ ಅವರೊಟ್ಟಿಗೆ ಕಳುಹಿಸಲಾಗಿತ್ತು.
ಬ್ಯಾಂಕ್ನಲ್ಲಿ 3 ಲಕ್ಷದ 6 ಸಾವಿರ ರೂ. ಡ್ರಾ ಮಾಡಿದ್ದರು. 50 ಸಾವಿರ ರೂ. ಕಿಸೆಯಲ್ಲಿರಿಸಿ, ಇನ್ನೂ 2.56 ಲಕ್ಷ ರೂಪಾಯಿಯನ್ನು ಸ್ಕೂಟಿಯಲ್ಲಿರಿಸಿ ಪಕ್ಕದ ಚಂದ್ರಶೇಖರ ಹೋಟೆಲ್ಗೆ ಚಹಾ ಸೇವನೆಗೆ ಹೋಗಿದ್ದರು. ಚಹಾ ಸೇವನೆಗೆ ಹೋಗಿ ಬರುವಷ್ಟರಲ್ಲಿ ಹಣ ಕಾಣೆಯಾಗಿರುವುದು ಕಂಡು ಬಂದಿದೆ.