ಕರ್ನಾಟಕ

karnataka

ETV Bharat / state

ನೀರಲೂಟಿ ಸರ್ಕಾರಿ ತೋಟಕ್ಕಿಲ್ಲ ನೀರು... ಬತ್ತಿ ಹೋಗುತ್ತಿವೆ ಬೋರ್​ವೆಲ್​​ಗಳು!

ತೋಟಗಾರಿಕೆ ಕ್ಷೇತ್ರದಲ್ಲಿ ಎಲ್ಲಿಯೇ ಕೊಳವೆ ಬಾವಿ ಹಾಕಿಸಿದರೂ ನೀರಿನ ಲಭ್ಯತೆ ಇಲ್ಲ. ಅಂತರ್ಜಲ ಸಿಕ್ಕರೂ ಕೆಲವೇ ದಿನಗಳಲ್ಲಿ ಬತ್ತಿ ಹೋಗುತ್ತದೆ. ಹೀಗಾಗಿ ಸಸ್ಯಗಳನ್ನು ಉಳಿಸಿಕೊಳ್ಳುವುದು ನಿಜಕ್ಕೂ ಸವಾಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಕೆ.ಎಂ.ರಮೇಶ್.

There is no water availability to govt garden at koppal
ನೀರಲೂಟಿ ಸರ್ಕಾರಿ ತೋಟಕ್ಕಿಲ್ಲ ನೀರಿನ ಲಭ್ಯತೆ

By

Published : Jul 12, 2020, 12:39 PM IST

ಕುಷ್ಟಗಿ(ಕೊಪ್ಪಳ): ತಾಲೂಕಿನ ನೀರಲೂಟಿ ತೋಟಗಾರಿಕಾ ಇಲಾಖೆಯ 40 ಎಕರೆ ವಿಸ್ತೀರ್ಣದ ಸಸ್ಯ ಕ್ಷೇತ್ರ ಇದೀಗ ನೀರಿನ ಅಭಾವದಿಂದ ತತ್ತರಿಸಿದೆ.

ಈ ಬಗ್ಗೆ ಮಾತನಾಡಿದ ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕ ಕೆ.ಎಂ.ರಮೇಶ್, ನೀರಲೂಟಿ ತೋಟಗಾರಿಕಾ ಕ್ಷೇತ್ರ ಸುಮಾರು 42 ಎಕರೆಯಷ್ಟು ವ್ಯಾಪ್ತಿಯಿದೆ. ಸಸ್ಯ ಕ್ಷೇತ್ರದ ಪಕ್ಕದಲ್ಲಿಯೇ ಕೆರೆ ಇದ್ದರೂ ಅದನ್ನು ಬಳಸುವಂತಿಲ್ಲ. ಕಾರಣ ಇದು ಲವಣಾಂಶದಿಂದ ಕೂಡಿದೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 6ಕ್ಕೂ ಹೆಚ್ಚು ಬೋರ್​ವೆಲ್​ಗಳನ್ನು ಕೊರೆಸಿದ್ದೇವೆ ಎಂದು ತಿಳಿಸಿದರು.

ನೀರಲೂಟಿ ಸರ್ಕಾರಿ ತೋಟಕ್ಕಿಲ್ಲ ನೀರಿನ ಲಭ್ಯತೆ

ನಂತರ ಮಾತನಾಡಿದ ಅವರು, ಕೊರೆಸಿರುವ ಬೋರ್​ವೆಲ್​ಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ನೀರು ಸಿಗುತ್ತಿರುವುದರಿಂದ ಬೇಸಿಗೆಯಲ್ಲಿ ಸಸ್ಯ ಸಂರಕ್ಷಣೆ ತುಂಬಾ ಕಷ್ಟ. ಅಲ್ಲದೆ ಪಕ್ಕದಲ್ಲಿರುವ ಕೆರೆಯ ನೀರನ್ನು ಬಳಸೋಣವೆಂದರೆ ಅದು ಲವಣಯುಕ್ತವಾಗಿದ್ದು, ಸಸಿಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವಿವರಿಸಿದರು.

ಅಲ್ಲದೆ ಈ ತೋಟಗಾರಿಕಾ ಕ್ಷೇತ್ರದಲ್ಲಿ ಎಲ್ಲಿಯೇ ಕೊಳವೆ ಬಾವಿ ಹಾಕಿಸಿದರೂ ನೀರಿನ ಲಭ್ಯತೆ ಇಲ್ಲ. ಅಂತರ್ಜಲ ಸಿಕ್ಕರೂ ಕೆಲವೇ ದಿನಗಳಲ್ಲಿ ಬತ್ತಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಸಸ್ಯಗಳನ್ನು ಉಳಿಸಿಕೊಳ್ಳುವುದು ನಿಜಕ್ಕೂ ಸವಾಲಾಗಿದೆ ಎಂದರು.

ABOUT THE AUTHOR

...view details