ಕರ್ನಾಟಕ

karnataka

ETV Bharat / state

ಗಂಗಾವತಿ: ವೃಂದಾವನದಲ್ಲಿ ವಿಶೇಷ ಆಚರಣೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ - ಜಯತೀರ್ಥರ ಆರಾಧನೆ

ವೃಂದಾವನದ ಗಡ್ಡೆಯಲ್ಲಿರುವ ಒಂದೇ ವೃಂದಾವನವನ್ನು ಉತ್ತರಾದಿ ಮಠದ ಭಕ್ತರು ರಘುವರ್ಯ ತೀರ್ಥರದ್ದು ಎಂದು, ರಾಯರ ಮಠದವರು ಜಯತೀರ್ಥರದ್ದು ಎಂದು ಗುರುತಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

there-is-no-special-ritual-in-vrindavan-dc-order
ವೃಂದಾವನದಲ್ಲಿ ಯಾವುದೇ ವಿಶೇಷ ಆಚರಣೆ ಇಲ್ಲದಂತೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

By

Published : Jul 8, 2022, 10:18 AM IST

ಗಂಗಾವತಿ:ಮಾಧ್ವಮತ ಅನುಯಾಯಿಗಳ ಪವಿತ್ರ ಧಾರ್ಮಿಕ ತಾಣವಾದ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನದಲ್ಲಿ ಜು.14ರಿಂದ 20ರವರೆಗೆ ಯಾವುದೇ ವಿಶೇಷ ಪೂಜೆಗೆ ಅವಕಾಶ ಇಲ್ಲವೆಂದು ನಿರ್ಬಂಧ ಹೇರಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಆದೇಶಿಸಿದ್ದಾರೆ. ಜು.14ರಿಂದ 20ರವರೆಗೆ ಉತ್ತರಾದಿ ಮಠದಿಂದ ರಘುವರ್ಯತೀರ್ಥರ ಮಹಿಮೋತ್ಸವ ಹಮ್ಮಿಕೊಳ್ಳಲು ಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ರಾಯರ ಮಠದಿಂದಲೂ ಜು.14ರಿಂದ 18ರವರೆಗೆ ಜಯತೀರ್ಥರ ಆರಾಧನೆಗೆ ಅವಕಾಶ ನೀಡುವಂತೆ ಭಕ್ತರು ಅವಕಾಶ ಕೋರಿದ್ದರು. ಈ ಸಂಬಂಧ ಉಭಯ ಮಠಗಳ ಭಕ್ತರು ಶ್ರೀಗಳ ನೇತೃತ್ವದಲ್ಲಿ ಪರಸ್ಪರ ಚರ್ಚಿಸಿ ಒಮ್ಮತದ‌ ನಿರ್ಧಾರ ಕೈಗೊಂಡು ಶಾಂತಿ, ಸೌಹಾರ್ದಯುತ ಧಾರ್ಮಿಕ ಆಚರಣೆ ಮಾಡುವಂತೆ ಜಿಲ್ಲಾಡಳಿತ ಸಲಹೆ ನೀಡಿತ್ತು.


ಆದರೆ, ಜಿಲ್ಲಾಡಳಿತದ ರಾಜಿ ಸೂತ್ರಕ್ಕೆ ರಾಯರಮಠದ ಭಕ್ತರು ಒಪ್ಪಿಗೆ ಸೂಚಿಸಿದ್ದರೂ ಉತ್ತರಾದಿ ಮಠದ ಭಕ್ತರು ಎರಡೂ ಮಠದ ಭಕ್ತರು ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ಸೇರುವುದರಿಂದ ಗೊಂದಲ ಉಂಟಾಗಿ ಗಲಾಟೆಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಲಹೆಯನ್ನು ಒಪ್ಪಿರಲಿಲ್ಲ. ಅಲ್ಲದೇ ವೃಂದಾವನದ ಗಡ್ಡೆಯಲ್ಲಿರುವ ಒಂದೇ ವೃಂದಾವನವನ್ನು ಉತ್ತರಾದಿ ಮಠದ ಭಕ್ತರು ರಘುವರ್ಯ ತೀರ್ಥರದ್ದು ಎಂದು, ರಾಯರ ಮಠದವರು ಜಯತೀರ್ಥರದ್ದು ಎಂದು ಗುರುತಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ, ಉಭಯ ಮಠದ ತಲಾ ಒಬ್ಬ ಅರ್ಚಕರಿಗೆ ಮಾತ್ರ ನಿತ್ಯಪೂಜೆಗೆ ಮಾತ್ರ ಅವಕಾಶ ನೀಡಿ, ಜು.14ರಿಂದ 20ರವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಮೂಲ ಬೃಂದಾವನದ ಬಗ್ಗೆ ಚರ್ಚೆ: ವಿವಾದದ ಕೇಂದ್ರಬಿಂದುವಾದ ಕಾಗಿಣಾ ನದಿ ತಟದ ಉತ್ತರಾದಿ ಮಠ

ABOUT THE AUTHOR

...view details