ಕರ್ನಾಟಕ

karnataka

ETV Bharat / state

ಕಿಮ್ಸ್ - ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ: ನಿಂತಲ್ಲೇ ನಿಂತ ಆ್ಯಂಬುಲೆನ್ಸ್​ಗಳು, ರೋಗಿಗಳ ಪರದಾಟ - ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿರುವ ನಾಲ್ಕು ಆ್ಯಂಬುಲೆನ್ಸ್​ಗಳ ಪೈಕಿ ಎರಡು ರಿಪೇರಿಗೆ ಬಂದು ನಿಂತಿದ್ದು, ಅವುಗಳ ರಿಪೇರಿ ಮಾಡಿಸಿದ ಕಾರಣ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆ್ಯಂಬುಲೆನ್ಸ್ ಮೊರೆ ಹೋಗುವ ಪರಿಸ್ಥಿತಿ ಒದಗಿ ಬಂದಿದೆ.

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರಿಪೇರಿಗೆ ಬಂದು ನಿಂತಿರುವ ಆ್ಯಂಬುಲೆನ್ಸ್​ಗಳು
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರಿಪೇರಿಗೆ ಬಂದು ನಿಂತಿರುವ ಆ್ಯಂಬುಲೆನ್ಸ್​ಗಳು

By

Published : Oct 19, 2021, 4:43 PM IST

ಕೊಪ್ಪಳ:ಹತ್ತು ಸಾವಿರ ರೂಪಾಯಿ ಕೊಟ್ಟು ಎಮ್ಮೆ ತಂದು ಹತ್ತು ರೂಪಾಯಿ ಮಡಿಕಿಗೆ ಶ್ಯಾಣ್ಯಾತನ ಮಾಡಿದಂತಾಗಿದೆ ಕೊಪ್ಪಳ ಜಿಲ್ಲಾಸ್ಪತ್ರೆ ಕಥೆ. ಹೇಳಿಕೊಳ್ಳುವುದಕ್ಕೆ ದೊಡ್ಡ ಜಿಲ್ಲಾಸ್ಪತ್ರೆ, ಆದರೆ, ಅತಿ ಅವಶ್ಯವಾಗಿ ಬೇಕಾಗುವ ಆ್ಯಂಬುಲೆನ್ಸ್ ಮಾತ್ರ ಪ್ರಸ್ತುತ ಲಭ್ಯವಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲಾಸ್ಪತ್ರೆ, ಇದು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದೆ. ಇಲ್ಲಿ ಎಎಲ್ಎಸ್, ನಗು - ಮಗು ಸೇರಿ ಒಟ್ಟು 4 ಆ್ಯಂಬುಲೆನ್ಸ್ ಗಳಿವೆ. ಈ ಪೈಕಿ 2 ಆ್ಯಂಬುಲೆನ್ಸ್​ಗಳು ರಿಪೇರಿಗೆ ಬಂದು ನಿಂತಿವೆ. ಒಂದು ಆ್ಯಂಬುಲೆನ್ಸ್​ಗೆ ನಾಲ್ಕು ಟೈರ್ ಹೊಸದಾಗಿ ಹಾಕಬೇಕಿದೆ. ಇನ್ನೊಂದಕ್ಕೆ ಆ್ಯಂಬುಲೆನ್ಸ್​ಗೆ ಎಂಜಿನ್ ಆಯಿಲ್ ಸೇರಿದಂತೆ ಸಣ್ಣಪುಟ್ಟ ರಿಪೇರಿ ಇದೆ. ಈ ಸಣ್ಣಪುಟ್ಟ ರಿಪೇರಿಯನ್ನು ಸಹ ಮಾಡಿಸಲು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ ತೋರಿರುವುದರಿಂದ ಸೆಪ್ಟೆಂಬರ್​​ 24 ರಿಂದ ಈ ಆ್ಯಂಬುಲೆನ್ಸ್​ಗಳು ನಿಂತಲ್ಲೇ ನಿಂತಿವೆ.

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರಿಪೇರಿಗೆ ಬಂದು ನಿಂತಿರುವ ಆ್ಯಂಬುಲೆನ್ಸ್​ಗಳು

ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್, ಗದಗ ಹಾಗೂ ಬಳ್ಳಾರಿಗೆ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯಲು ಈ ಆ್ಯಂಬುಲೆನ್ಸ್ ಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆ್ಯಂಬುಲೆನ್ಸ್ ಮೊರೆ ಹೋಗಬೇಕಿದೆ.

ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಅಡಿ ಜಿಲ್ಲಾಸ್ಪತ್ರೆ ಬರುವುದರಿಂದ ಈ ಬಗ್ಗೆ ಆ್ಯಂಬುಲೆನ್ಸ್ ಚಾಲಕರು ಕಿಮ್ಸ್ ನಿರ್ದೇಶಕರಿಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರ ಮೂಲಕ ಪತ್ರ ಬರೆದಿದ್ದಾರೆ. ಆದರೆ ಇಲ್ಲಿಯವರೆಗೂ ರಿಪೇರಿ ಮಾಡಿಸಿಲ್ಲ. ಒಂದು ವಾಹನಕ್ಕೆ 30,000 ರೂಪಾಯಿ ಒಳಗೆ ರಿಪೇರಿ ಖರ್ಚು ಬರಲಿದ್ದು, ಅನುದಾನದ ಕೊರತೆಯ ನೆಪ ಹೇಳಿ ನಿರ್ಲಕ್ಷ್ಯ ತೋರುತ್ತಿದ್ದಾರೆ.

ABOUT THE AUTHOR

...view details