ಕೊಪ್ಪಳ: ಕೆಲವೊಮ್ಮೆ ಸಣ್ಣ ಕಣ್ತಪ್ಪಿನಿಂದ ಆಗುವ ತಪ್ಪುಗಳು ದೊಡ್ಡ ಯಡವಟ್ಟುಗಳಾಗುತ್ತವೆ ಅನ್ನುವುದಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರಿಗೆ ಬರೆಸಲಾಗಿರುವ ಕನ್ನಡದ ಅಕ್ಷರಗಳು ಸಾಕ್ಷಿಯಾಗಿದೆ.
ಜಿಲ್ಲಾಧಿಕಾರಿ ವಾಹನದ ಮೇಲೆ ''ಕರ್ನಾಟಕ'' ಬದಲಿಗೆ ''ಕನಾರ್ಟಕ'' - ಕೊಪ್ಪಳ ಜಿಲ್ಲಾಧಿಕಾರಿ
ಕೊಪ್ಪಳ ಜಿಲ್ಲಾಧಿಕಾರಿಗೆ ನೂತನ ಇನೋವಾ ಕಾರು ದೊರೆತಿದ್ದು, ಈ ಕಾರಿನಲ್ಲಿ ಕರ್ನಾಟಕ ಸರ್ಕಾರ ಎಂದು ಬರೆಯವ ಬದಲಾಗಿ ಕನಾರ್ಟಕ ಸರ್ಕಾರ ಎಂದು ಬರೆಯಲಾಗಿದೆ.
ಕಾರಿನ ಮೇಲೆ ಕರ್ನಾಟಕ ಎಂಬ ಪದ ತಪ್ಪಾಗಿರುವುದು
ಒಂದು ವಾರದ ಹಿಂದೆ ಜಿಲ್ಲಾಧಿಕಾರಿಗಳ ಸಂಚಾರಕ್ಕೆ ನೂತನ ಇನೋವಾ ಕಾರ್ ಬಂದಿದೆ. ಹೊಸ ಕಾರಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಕರ್ನಾಟಕ ಸರ್ಕಾರ ಎಂದು ಬರೆಸುವ ಬದಲು "ಕನಾರ್ಟಕ" ಎಂದು ರೇಡಿಯಂ ಮೂಲಕ ಬರೆಸಲಾಗಿದೆ. ಕರ್ನಾಟಕದ ಬದಲು ಕನಾರ್ಟಕ ಎಂದು ಬರೆದಿರುವುದು ಎದ್ದು ಕಾಣುತ್ತಿದೆ.
ಇದು ರೇಡಿಯಂ ಕಟರ್ ಮಾಡಿರುವ ತಪ್ಪೋ ಅಥವಾ ಬರೆದುಕೊಟ್ಟವರು ಮಾಡಿದ ತಪ್ಪೋ ಎಂಬುದು ತಿಳಿದುಬಂದಿಲ್ಲ.