ಕೊಪ್ಪಳ:ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು ನಗನಾಣ್ಯ ದೋಚಿಕೊಂಡು ಪರಾರಿಯಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ನಡೆದಿದೆ.
ಕೊಪ್ಪಳದಲ್ಲಿ ಕಳ್ಳರ ಕೈಚಳಕ: ಚಿನ್ನ-ಬೆಳ್ಳಿ ಸೇರಿ ನಗದು ದೋಚಿ ಪರಾರಿ - latest koppala crime news
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ವೀರಭದ್ರಯ್ಯ ಸರಗಣಾಚಾರಿ ಎಂಬುವವರಿಗೆ ಸೇರಿದ ಮನೆಗೆ ನುಗ್ಗಿದ ಕಳ್ಳರು 65 ಗ್ರಾಂ ಚಿನ್ನ, 25 ಗ್ರಾಂ ಬೆಳ್ಳಿ ಮತ್ತು ಒಂದು ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಕೊಪ್ಪಳದಲ್ಲಿ ಕಳ್ಳರ ಕೈಚಳಕ : ಚಿನ್ನ-ಬೆಳ್ಳಿ ಸೇರಿ ನಗದು ದೋಚಿ ಪರಾರಿ
ಕೇಸೂರು ಗ್ರಾಮದ ವೀರಭದ್ರಯ್ಯ ಸರಗಣಾಚಾರಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯ ಮೇಲ್ಛಾವಣಿ ಕಿಟಕಿ ಮುರಿದು ಮನೆಗೆ ನುಗ್ಗಿರುವ ಕಳ್ಳರು, 65 ಗ್ರಾಂ ಚಿನ್ನ, 25 ಗ್ರಾಂ ಬೆಳ್ಳಿ ಮತ್ತು ಒಂದು ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.