ಗಂಗಾವತಿ: ನಗರದ ಹೊರವಲಯ ಕೊಪ್ಪಳ ರಸ್ತೆಯಲ್ಲಿರುವ ವಡ್ಡರಹಟ್ಟಿ ಸಮೀಪದ ಎಸ್‌ಬಿಐ (SBI) ಬ್ಯಾಂಕಿಗೆ ನುಗ್ಗಿದ ಕಳ್ಳರು, ಸಿಸಿ ಕ್ಯಾಮರಾದ ಕೇಬಲ್ ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಮೊದಲಿಗೆ ಮುಸುಕು ಹಾಕಿಕೊಂಡು ಒಂದಿಷ್ಟು ಸಿಸಿ ಕ್ಯಾಮರಾದ ಕೇಬಲ್ ಕತ್ತರಿಸಿದ ಕಳ್ಳರು, ಬಳಿಕ ಬ್ಯಾಂಕಿನ ಮುಖ್ಯ ಬಾಗಿಲು ಒಡೆದು ಒಳಕ್ಕೆ ನುಗ್ಗಿದ್ದಾರೆ. ಬ್ಯಾಂಕಿನಲ್ಲಿ ಹಣ ಹಾಗೂ ಬಂಗಾರದ ಒಡವೆಗಳನ್ನು ಕದಿಯಲು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಯತ್ನಿಸಿದ್ದಾರೆ.