ಗಂಗಾವತಿ :ಅಂಗನಾಡಿ ಶಿಕ್ಷಕಿಯ ಮನೆಗೆ ಕನ್ನ ಹಾಕಿದ ಕಳ್ಳರು 2.65 ಲಕ್ಷ ರೂ. ಮೊತ್ತದ ನಗ, ನಾಣ್ಯ ದೋಚಿ ಪರಾರಿಯಾದ ಘಟನೆ ತಾಲೂಕಿನ ಕನಕಗಿರಿಯಲ್ಲಿ ನಡೆದಿದೆ.
ಹುಲಿಹೈದರ ಗ್ರಾಮದ ಅಂಗನವಾಡಿ ಶಿಕ್ಷಕಿ ನಾಗರತ್ನ ಗೋಪಾಲ ಶೆಟ್ಟಿ ಎಂಬುವರು ಶಿರಗುಪ್ಪಾ ತಾಲೂಕಿನ ದರೂರು ಗ್ರಾಮದ ತಮ್ಮ ತಂಗಿಯನ್ನು ನೋಡಲು ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತ ಕಳ್ಳರು ಕೈಚಳಕ ತೋರಿದ್ದಾರೆ.