ಗಂಗಾವತಿ: ವಡ್ಡರಹಟ್ಟಿ ಕ್ಯಾಂಪಿನಲ್ಲಿರುವ ಶ್ರೀರಾಮ ಮಂದಿರ ದೇಗುಲಕ್ಕೆ ಕನ್ನ ಹಾಕಿದ ಖದೀಮರು ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ. ವಿಗ್ರಹಕ್ಕೆ ಅಲಂಕಾರ ಮಾಡುವ ವಡವೆಗಳು ನಾಪತ್ತೆಯಾಗಿವೆ.
ಅಲ್ಲದೇ ವಡ್ಡರಹಟ್ಟಿ ಗ್ರಾಮದಲ್ಲಿರುವ ರಾಮನ ದೇಗುಲದಲ್ಲಿದ್ದ ಸುಮಾರು ಐದು ಸಾವಿರ ರೂ. ಕಳ್ಳತನವಾಗಿದೆ. ಆರ್ಹಾಳ ಗ್ರಾಮದ ರುದ್ರೇಶ್ವರ ದೇಗುಲದಲ್ಲಿನ ಹುಂಡಿ ಹಣವನ್ನು ಸಹ ಕಳ್ಳರು ಎಗರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.